Monday, June 8, 2026
Homeತಾಜಾ ಸುದ್ದಿಆಗಸದೆತ್ತರಕ್ಕೆ ಹಾರಿದ 360 ಅಡಿ ಉದ್ದದ ಕನ್ನಡ ಬಾವುಟ!.. ಹೊಸ ಮಾದರಿಯ ಕನ್ನಡಾಭಿಮಾನ ಮೆರೆದ ಡಿಎಸ್...

ಆಗಸದೆತ್ತರಕ್ಕೆ ಹಾರಿದ 360 ಅಡಿ ಉದ್ದದ ಕನ್ನಡ ಬಾವುಟ!.. ಹೊಸ ಮಾದರಿಯ ಕನ್ನಡಾಭಿಮಾನ ಮೆರೆದ ಡಿಎಸ್ ಮ್ಯಾಕ್ಸ್ ಸಂಸ್ಥೆ

- Advertisement -
- Advertisement -

ಕೆ.ಆರ್.ಪುರ: ಸರ್ವಜ್ಞನಗರದ ಎಚ್‌ಬಿಆರ್‌ ಬಡಾವಣೆಯ ಡಿಎಸ್ ಮ್ಯಾಕ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಯ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ತರಲಾಯಿತು. ಡಿಎಸ್ ಮ್ಯಾಕ್ಸ್ ಸಂಸ್ಥೆಯ ಸಿಬ್ಬಂದಿ ಈ ಸಾನ್ದ್ರಭ 360 ಅಡಿ ಉದ್ದದ ಕನ್ನಡ ಬಾವುಟವನ್ನು ಪ್ರದರ್ಶಿಸಿದರು. ಕರ್ನಾಟಕದ ಹೆಮ್ಮೆಯ ಬಾವುಟವು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಇದೆ ವೇಳೆ ಕನ್ನಡ ಹಾಗೂ ಕೊರೊನಾ ಜಾಗೃತಿಯ ಫಲಕಗಳನ್ನೂ ಪ್ರದರ್ಶಿಸಲಾಯಿತು.
‘ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಪ್ರತಿವರ್ಷವೂ ಪ್ರೋತ್ಸಾಹಿಸುವ ಕೆಲಸವನ್ನು ಡಿಎಸ್ ಮ್ಯಾಕ್ಸ್ ಸಂಸ್ಥೆ ಮಾಡುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಎಸ್.ಪಿ.ದಯಾನಂದ ತಿಳಿಸಿದರು.

- Advertisement -

Latest News

error: Content is protected !!