Thursday, June 4, 2026
Homeತಾಜಾ ಸುದ್ದಿಮಹಿಳೆಯನ್ನು ಜೀವಂತ ನುಂಗಿದ 22 ಅಡಿ ಉದ್ದದ ಹೆಬ್ಬಾವು;  ಹಾವಿನ ಹೊಟ್ಟೆ ಸೀಳಿ ಆಕೆಯನ್ನು ರಕ್ಷಿಸಿದ...

ಮಹಿಳೆಯನ್ನು ಜೀವಂತ ನುಂಗಿದ 22 ಅಡಿ ಉದ್ದದ ಹೆಬ್ಬಾವು;  ಹಾವಿನ ಹೊಟ್ಟೆ ಸೀಳಿ ಆಕೆಯನ್ನು ರಕ್ಷಿಸಿದ ಗ್ರಾಮಸ್ಥರು

- Advertisement -
- Advertisement -

ಇಂಡೋನೇಷ್ಯಾ;  22 ಅಡಿ ಉದ್ದದ  ಹೆಬ್ಬಾವೊಂದು  54 ವರ್ಷದ ಮಹಿಳೆಯನ್ನು ಜೀವಂತ ನುಂಗಿ ಬಳಿಕ ಆಕೆಯನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ  ಇಂಡೋನೇಷಿಯಾದಲ್ಲಿ ನಡೆದಿದೆ.

ಇಲ್ಲಿನ ಆಗ್ನೇಯ ಸುಲಾವೇಸಿಯಲ್ಲಿರುವ ಮುನಾ ದ್ವೀಪದಲ್ಲಿ ವಾ ಟಿಬಾ ಎಂಬ ಮಹಿಳೆ ತನ್ನ ತರಕಾರಿ ತೋಟಕ್ಕೆ ತರಕಾರಿ ಕೊಯ್ಯಲು ಹೋದಾಗ ಆಕೆಯನ್ನು ಹೆಬ್ಬಾವು ನುಂಗಿದೆ. ಎಷ್ಟು ಹೊತ್ತಾದರೂ ಈಕೆ ಮನೆಗೆ ಮರಳದೇ ಇದ್ದಾಗ ಆತಂಕಗೊಂಡ ಮನೆಮಂದಿ ಮತ್ತು ಗ್ರಾಮಸ್ಥರು ಹುಡುಕಲು ಆರಂಭಿಸಿದ್ದಾರೆ.

ಹಾಗೆ ಹುಡುಕುತ್ತಾ ತೋಟಕ್ಕೆ ಬಂದಿದ್ದಾರೆ. ಅಲ್ಲಿ ಆಕೆಯ ಚಪ್ಪಲಿ​ ಮತ್ತು ಬ್ಯಾಟರಿ ಪತ್ತೆಯಾಗಿದೆ. ಇಲ್ಲೇ ಎಲ್ಲೋ ಹತ್ತಿರದಲ್ಲೇ ಇರಬೇಕು ಎಂದು ಹುಡುಕಾಟ ಮುಂದುವರಿಸಿದ್ದಾರೆ. ಈ ವೇಳೆ ಭಾರೀ ಗಾತ್ರದ ಹೆಬ್ಬಾವು ಏನೋ ತಿಂದಂತೆ ಗೋಚರಿಸಿದೆ. ಅನುಮಾನಗೊಂಡ ಗ್ರಾಮಸ್ಥರು ನಂತರ ಅದರ ಹೊಟ್ಟೆಯನ್ನು ಸೀಳಿದ್ದಾರೆ. ಆಗ ಟಿಬಾ ಕಂಡಿದ್ದಾಳೆ. ಕೂಡಲೆ ಆಕೆಯನ್ನು ರಕ್ಷಿಸಿ ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ.

- Advertisement -

Latest News

error: Content is protected !!