Sunday, June 7, 2026
Homeಕರಾವಳಿಉಪ್ಪಿನಂಗಡಿ; ಗಾಂಜಾ ಮಾರಾಟ ಮಾಡಲು ಯತ್ನ ಆರೋಪ; ವ್ಯಕ್ತಿಯನ್ನು ಬೆನ್ನಟ್ಟಿದ ಯುವಕರ ತಂಡ

ಉಪ್ಪಿನಂಗಡಿ; ಗಾಂಜಾ ಮಾರಾಟ ಮಾಡಲು ಯತ್ನ ಆರೋಪ; ವ್ಯಕ್ತಿಯನ್ನು ಬೆನ್ನಟ್ಟಿದ ಯುವಕರ ತಂಡ

- Advertisement -
- Advertisement -

ಉಪ್ಪಿನಂಗಡಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬರನ್ನು ಯುವಕರ ತಂಡ ಬೆನ್ನಟ್ಟಿಕೊಂಡು ಹೋಗಿ ಕಾರಿನ ಮೇಲೆ ದಾಳಿ ನಡೆಸಿದ ಘಟನೆ ಸುಬ್ರಹ್ಮಣ್ಯ ಕ್ರಾಸ್ ಬಳಿ ನಡೆದಿದೆ.

ಸಿದ್ದಿಕ್ ಎಂಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಶಂಕಿಸಿ ಉಪ್ಪಿನಂಗಡಿಯ ಕರಾಯ ಪರಿಸರದ ಯುವಕರ ತಂಡ ಬೆನ್ನಟ್ಟಿದೆ. ಅಲ್ಲದೇ ಕಾರಿಗೆ ಕಲ್ಲೆಸೆದು ಪರಸ್ಪರ ಹಲ್ಲೆ ನಡೆಸಿ ದಾಂಧಲೆ ಮಾಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಯಾರಿಂದಲೂ ದೂರು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!