Thursday, June 4, 2026
Homeಕರಾವಳಿಉಡುಪಿಮಲ್ಪೆ: ಅಪಾರ್ಟ್‌ಮೆಂಟ್‌ನಿಂದ ಆಯತಪ್ಪಿ ಬಿದ್ದು ಬಾಲಕ ಮೃತ್ಯು

ಮಲ್ಪೆ: ಅಪಾರ್ಟ್‌ಮೆಂಟ್‌ನಿಂದ ಆಯತಪ್ಪಿ ಬಿದ್ದು ಬಾಲಕ ಮೃತ್ಯು

- Advertisement -
- Advertisement -

ಮಲ್ಪೆ: ಬಾಲಕನೊಬ್ಬ ಅಪಾರ್ಟ್ ಮೆಂಟ್ ಮೇಲಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಲ್ಪೆ ಠಾಣೆ ವ್ಯಾಪ್ತಿಯ ಕನ್ನರ್ಪಾಡಿಯಲ್ಲಿ ಸಂಭವಿಸಿದೆ.

ಉದ್ಯಾವರದಲ್ಲಿ ನೆಲೆಸಿರುವ ಆಂದ್ರ ಪ್ರದೇಶ ಮೂಲದ ರೀನಾ ಮಂಡೆಲ್ ಎಂಬವರ ಮಗ ಅಶಿಕ್ (13) ಮೃತಪಟ್ಟ ಬಾಲಕ.

ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಎದುರು ಇರುವ ಅಪಾರ್ಟ್ ಮೆಂಟ್ ನಲ್ಲಿ ಇದ್ದ ಜೇನನ್ನು ಆಂದ್ರ ಮೂಲದ ರೀನಾ ಮಂಡಲ್ ತೆಗೆಯುತ್ತಿದ್ದರು. ಮಹಡಿ ಮೇಲಿಂದ ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದ ಆಶಿಕ್ ಆಯತಪ್ಪಿ ಆಕಸ್ಮಿಕವಾಗಿ ಅಪಾರ್ಟ್ ಮೆಂಟ್ ನ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂಬುದಾಗಿ ರೀನಾ ಮಂಡೆಲ್ ಅವರು ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!