Sunday, June 7, 2026
Homeತಾಜಾ ಸುದ್ದಿಸಿಇಟಿ ರ಼್ಯಾಂಕಿಂಗ್ ಗೊಂದಲ ವಿಚಾರ; ಇಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ ವರದಿ ಸಲ್ಲಿಕೆ

ಸಿಇಟಿ ರ಼್ಯಾಂಕಿಂಗ್ ಗೊಂದಲ ವಿಚಾರ; ಇಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ ವರದಿ ಸಲ್ಲಿಕೆ

- Advertisement -
- Advertisement -

ಬೆಂಗಳೂರು: ಸಿಇಟಿ ರ್‍ಯಾಂಕಿಂಗಿಗೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ವರದಿ ಸಲ್ಲಿಸಲಿದೆ.

ಸಿಇಟಿ ಸಂಬಂಧ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಅಗತ್ಯವಾದ ಸಮನ್ವಯ ಸೂತ್ರವನ್ನು ರೂಪಿಸಲು ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿ ನಿನ್ನೆ ಸಂಜೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ವರದಿ ನೀಡಲು ಐವರ ಸಮಿತಿಯನ್ನು ರಚಿಸಲಾಗಿತ್ತು.

2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸದೇ, ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳಲ್ಲಿ ತಲಾ ಶೇಕಡಾ 45ರಷ್ಟನ್ನು ಪರಿಗಣಿಸಿ, ಸಾಮೂಹಿಕವಾಗಿ ತೇರ್ಗಡೆ ಮಾಡಲಾಗಿತ್ತು.

ನಂತರ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದ ಕಾರಣ ಸಮನ್ವಯ ಸೂತ್ರ ಸಿದ್ದಪಡಿಸುವಂತೆ ಸೂಚಿಸಿ ವರದಿ ನೀಡುವಂತೆ ಇಂದಿನವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿತ್ತು.

- Advertisement -

Latest News

error: Content is protected !!