Wednesday, June 3, 2026
Homeಕರಾವಳಿಉಗ್ರ ಚಟುವಟಿಕೆ ಜೊತೆ ನಂಟು ಆರೋಪ; ಬಂಧಿತ ಮಾಝ್ ಅಹಮದ್ ನನ್ನು ವಾಪಸ್ ಶಿವಮೊಗ್ಗಕ್ಕೆ ಕರೆದೊಯ್ದ...

ಉಗ್ರ ಚಟುವಟಿಕೆ ಜೊತೆ ನಂಟು ಆರೋಪ; ಬಂಧಿತ ಮಾಝ್ ಅಹಮದ್ ನನ್ನು ವಾಪಸ್ ಶಿವಮೊಗ್ಗಕ್ಕೆ ಕರೆದೊಯ್ದ ಪೊಲೀಸರು

- Advertisement -
- Advertisement -

ಬಂಟ್ವಾಳ: ಉಗ್ರ ಚಟುವಟಿಕೆ ಜೊತೆ ನಂಟು ಆರೋಪದಡಿ ಬಂಧಿತನಾಗಿರುವ ಮಾಝ್ ಅಹಮದ್ ನನ್ನು ಸ್ಥಳ ಮಹಜರು ನಡೆಸಿ ಪೊಲೀಸರು ವಾಪಸ್ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.

ನಿನ್ನೆ‌ ಆರೋಪಿ ಮಾಝ್ ನನ್ನು ಶಿವಮೊಗ್ಗದಿಂದ ಬಂಟ್ವಾಳಕ್ಕೆ ಕರೆ ತಂದಿದ್ದ ಪೊಲೀಸರು, ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ
ವ್ಯಾಪ್ತಿಯ ಸುಲ್ತಾನ್‌ಕಟ್ಟೆ, ಅಗ್ರಹಾರ ಬಳಿ‌ ಮಹಜರು ನಡೆಸಿದ್ದರು.

ಈ ಜಾಗಗಳಲ್ಲಿ ಮಾಝ್ ಅಹಮದ್ ಬಾಂಬ್ ಸ್ಫೋಟದ ರಿಹರ್ಸಲ್ ಮಾಡುತ್ತಿದ್ದ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದರು.ಈ ಮಧ್ಯೆ ಸ್ಥಳ ಮಹಜರು ವೇಳೆ ಸ್ಪೋಟಕದ ಕಚ್ಛಾ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಸ್ಥಳ ಮಹಜರು ಬಳಿಕ ರಾತ್ರಿಯೇ ಆರೋಪಿ ಮಾಝ್ ಅಹಮದ್ ನನ್ನು ಪೊಲೀಸರು ಶಿವಮೊಗ್ಗಕ್ಕೆ ವಾಪಸ್ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!