Wednesday, June 17, 2026
Homeಕರಾವಳಿಮಂಗಳೂರಿನಿಂದ ಪುತ್ತೂರಿನಿಂದ ತೆರಳುವ ಖಾಸಗಿ ಬಸ್ ನಲ್ಲಿ ಕಳ್ಳಿಯ ಕೈಚಳಕ; ಮಹಿಳೆಯ ಬ್ಯಾಗ್ ನಿಂದ ಪರ್ಸ್...

ಮಂಗಳೂರಿನಿಂದ ಪುತ್ತೂರಿನಿಂದ ತೆರಳುವ ಖಾಸಗಿ ಬಸ್ ನಲ್ಲಿ ಕಳ್ಳಿಯ ಕೈಚಳಕ; ಮಹಿಳೆಯ ಬ್ಯಾಗ್ ನಿಂದ ಪರ್ಸ್ ಎಗರಿಸಿದ ಚಾಲಾಕಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನದ ದೃಶ್ಯ

- Advertisement -
- Advertisement -

ಪುತ್ತೂರು; ಮಂಗಳೂರಿನಿಂದ ಪುತ್ತೂರಿಗೆ ತೆರಳುವ ಖಾಸಗಿ ಬಸ್ ನಲ್ಲಿ ಕಳ್ಳಿಯೊಬ್ಬಳು ಕೈಚಳಕ ತೋರಿದ್ದಾಳೆ. ಮಂಗಳೂರಿನಿಂದ- ಪುತ್ತೂರಿಗೆ ತೆರಳುವ ಮಹೇಶ್  ಬಸ್ ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿದ್ದ ಪರ್ಸ್‌ನ್ನು ಮತ್ತೊಬ್ಬ ಮಹಿಳೆ ಎಗರಿಸಿದ್ದಾಳೆ. ಕಳ್ಳತನದ ದೃಶ್ಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ‌.

ಮಂಗಳೂರಿನಿಂದ ಪುತ್ತೂರಿಗೆ ಸಂಚರಿಸುತ್ತಿದ್ದಾಗ ಬಸ್ಸಿನಲ್ಲಿದ್ದ ಪುತ್ತೂರು ತಾ.ಪಂ.ನ ಅಧಿಕಾರಿಯೋರ್ವರ ಪರ್ಸ್‌ ಕಳವು ಮಾಡಲಾಗಿದೆ.ಕಳವು ದೃಶ್ಯ ಬಸ್‌ ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಅಂದಾಜು ಐವತ್ತು ವರ್ಷದ ಮಹಿಳೆಯು ಕಲ್ಲಡ್ಕ ಬಳಿ ಬಸ್‌ ಹತ್ತಿ ಮಹಿಳೆಯೋರ್ವರ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಪುತ್ತೂರು ಪೇಟೆ ಸಮೀಪಿಸಿದ ಕಾರಣ ಮಹಿಳೆ ತನ್ನ ಕೈಯಲ್ಲಿದ್ದ ಮೊಬೈಲ್‌ ಅನ್ನು ಬ್ಯಾಗ್‌ ನೊಳಗೆ ಹಾಕಿ ಇಳಿಯಲೆಂದು ಎದ್ದು ನಿಂತಿದ್ದರು.ಈ ವೇಳೆ ಕಳ್ಳಿ ಬ್ಯಾಗ್‌ ಗೆ ಕೈ ಹಾಕಿ ಪರ್ಸ್‌ ಎಗರಿಸಿದ್ದಾಳೆ.

ಬಸ್‌ ನಿಂದ ಇಳಿದ ವೇಳೆ ಅವರಿಗೆ ಪರ್ಸ್‌ ಕಳ್ಳತನ ವಾಗಿರುವ ವಿಷಯ ಬೆಳಕಿಗೆ ಬಂದು ಬಸ್‌ ನವರನ್ನು ಸಂಪರ್ಕಿಸಿದ್ದಾರೆ.ಬಸ್‌ ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನದ ದೃಶ್ಯ ಸೆರೆಯಾಗಿದೆ. ಮಹಿಳೆಯ ಪರ್ಸ್ ನಲ್ಲಿ 5 ಸಾವಿರ ನಗದು ಹಾಗೂ ಕೆಲವು ದಾಖಲೆಗಳಿದ್ದವು ಎನ್ನಲಾಗಿದ್ದು, ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!