Friday, June 5, 2026
Homeಕ್ರೀಡೆತಮಿಳು ಚಿತ್ರರಂಗದಲ್ಲಿ ಮಿಂಚಲು ಸಜ್ಜಾದ ಕ್ರಿಕೆಟಿಗ ಹರ್ಭಜನ್ ಸಿಂಗ್

ತಮಿಳು ಚಿತ್ರರಂಗದಲ್ಲಿ ಮಿಂಚಲು ಸಜ್ಜಾದ ಕ್ರಿಕೆಟಿಗ ಹರ್ಭಜನ್ ಸಿಂಗ್

- Advertisement -
- Advertisement -

ಚೆನ್ನೈ: ಟೀಂ ಇಂಡಿಯಾದ ಕ್ರಿಕೆಟಿಗ ಟರ್ಬೊನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ​ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಅತಿಥಿ ಪಾತ್ರದಲ್ಲಿ ಮಿಂಚಿದ್ದ ಹರ್ಭಜನ್ ಇದೇ ಮೊದಲ ಬಾರಿಗೆ ಹೀರೋ ತಮಿಳು ಚಿತ್ರ ‘ಫ್ರೆಂಡ್​ಶಿಪ್’​ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುಮಾರು 4 ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಹರ್ಭಜನ್, ತಮ್ಮ ಚೊಚ್ಚಲ ಚಿತ್ರದ ಪೋಸ್ಟರ್‌ನಲ್ಲಿ ದಕ್ಷಿಣ ಭಾರತದ ಖ್ಯಾತ ಆಕ್ಷನ್ ಹೀರೋ ಅರ್ಜುನ್ ಸರ್ಜಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಜಾನ್ ಪಾಲ್ ರಾಜ್ ಮತ್ತು ಶ್ಯಾಮ್ ಸೂರ್ಯ ನಿರ್ದೇಶಿಸಿದ್ದಾರೆ.

ಇದು ಬಹುಶಃ ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಡಬ್ಬಿಂಗ್ ಮೂಲಕ ಬಿಡುಗಡೆಯಾಗಲಿದೆ. ಚಿತ್ರ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

View this post on Instagram

#friendshipmovie ??

A post shared by Harbhajan Turbanator Singh (@harbhajan3) on

- Advertisement -

Latest News

error: Content is protected !!