Tuesday, April 30, 2024
Homeಕರಾವಳಿಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ವಿಶುವಲ್ ಕಮ್ಯೂನಿಕೇಶನ್ ಕೋರ್ಸ್ ಆರಂಭ

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ವಿಶುವಲ್ ಕಮ್ಯೂನಿಕೇಶನ್ ಕೋರ್ಸ್ ಆರಂಭ

spot_img
- Advertisement -
- Advertisement -

ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಮಂಗಳೂರು ಇಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗಿರುವ ಪತ್ರಿಕೋದ್ಯಮ ವಿಭಾಗದಲ್ಲಿನ ಹೊಚ್ಚ ಹೊಸ ಕೋರ್ಸ್ ಬಿ.ಎಸ್ಸಿ ವಿಶುವಲ್ ಕಮ್ಯುನಿಕೇಶನ್ ಅನ್ನ ಅಧಿಕೃತವಾಗಿ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ ಲೋಕಾರ್ಪಣೆಗೊಳಿಸಿದ್ರು.

ಈ ಐತಿಹಾಸಿಕ ಕ್ಷಣದ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಎಲ್ ಎಫ್ ರಸ್ಕಿನ್ಹಾ ಸಭಾಂಗಣದಲ್ಲಿ ಉದ್ಘಾಟಕರ ಕೈಯಿಂದ ಸಭೆಯಲ್ಲಿದ್ದ ವಿದ್ಯಾರ್ಥಿಗಳ ಭಾವಚಿತ್ರವನ್ನು ಪೋಲರಾಯ್ಡ್ ಕ್ಯಾಮರಾದಿಂದ ತೆಗೆಯೋ ಮುಖಾಂತರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ವಿಶುವಲ್ ಕಮ್ಯೂನಿಕೇಶನ್ ನಲ್ಲಿ ಬಿ.ಎಸ್ಸಿ. ಪದವಿಯನ್ನು ಪರಿಚಯಿಸಲಾಗುತ್ತಿದೆ.

ಕಾರ್ಯಕ್ರಮದ ಮುಖ್ಯ ಅತಿಥಿ, ರೀಲ್ ಟ್ರೈಬ್ ಡಿಜಿಟಲ್ ಸಂಸ್ಥೆಯ ಸ್ಥಾಪಕರಾದ ಹೃಶಿಕೇಶ್ ಅನಿಲ್ ಕುಮಾರ್ ರವರು ವಿಶುವಲ್ ಕಮ್ಯೂನಿಕೇಶನ್ ವಿಭಾಗದ ಅಧಿಕೃತ ಯೂಟ್ಯೂಬ್ ವಾಹಿನಿ ಮತ್ತು ‘ ಕ್ಯಾಂಪಸ್ ಬಝ್’ ಎಂಬ ವಿದ್ಯಾರ್ಥಿ ಬ್ಲಾಗ್ ಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಲಾದ ಮರಳು ಕಲೆಯ ಚಿತ್ರವೊಂದನ್ನೂ ಗಣ್ಯರಿಂದ ಅನಾವರಣಗೊಳಿಸಲಾಯಿತು.

ಈ ಕೋರ್ಸ್ ನ ಉದ್ದೇಶ ಕಲೆ, ಸೃಜನಶೀಲತೆ, ಮತ್ತು ತಂತ್ರಜ್ಞಾನದ ಸಂಗಮದೊಂದಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ದಾರಿದೀಪವಾಗುವುದಲ್ಲದೆ, ಆಧುನಿಕ ಮಾಧ್ಯಮ ಜಗತ್ತಿಗೆ ಸಮರ್ಥ ಅಭ್ಯರ್ಥಿಗಳನ್ನು ತಯಾರಿಸುವುದಾಗಿದೆ.

ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ ಎಸ್ ಜೆ, ಪ್ರಾಂಶುಪಾಲರಾದ ವಂ. ಡಾ ಪ್ರವೀಣ್ ಮಾರ್ಟಿಸ್ ಎಸ್ ಜೆ, ಕುಲಪತಿ ಡಾ ಆಲ್ವಿನ್ ಡಿಸಾ, ವಿಭಾಗ ಮುಖ್ಯಸ್ಥರಾದ ಡಾ ಶ್ವೇತಾ ಮಂಗಳತ್ ಮತ್ತು ಕೋರ್ಸ್ ಸಂಯೋಜಕರಾದ ಅಬ್ದುಲ್ ರಶೀದ್, ಕ್ಸೇವಿಯರ್ ವಿಜ್ಞಾನ ಬ್ಲಾಕ್ ನ ನಿರ್ದೇಶಕ ಡಾ ನಾರಾಯಣ ಭಟ್, AIMIT ಬೀರಿಯ ನಿರ್ದೇಶಕರಾದ ವಂ. ಡಾ ಮೆಲ್ವಿನ್ ಪಿಂಟೋ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಮುಖ್ಯ ಅತಿಥಿಯೊಂದಿಗೆ ಸಂವಾದ ನಡೆಯಿತು. ಶ್ರೀ ಹೃಶಿಕೇಶ್, ನಾವು ಜೀವನಗಳನ್ನು ಬದಲಾಯಿಸುವುದರಿಂದ ಕೇವಲ 3 ಸೆಕೆಂಡ್ ದೂರವಿದ್ದೇವೆ ಎಂದು ಹೇಳಿದರು. ನಂತರ ಕಾಲೇಜಿನ ಆವರಣದಲ್ಲಿ ಕೋರ್ಸನ್ನು ಪರಿಚಯಿಸುವ ಸಲುವಾಗಿ ಫ್ಲಾಶ್ ಮಾಬ್ ನಡೆಯಿತು. ಈ ಐತಿಹಾಸಿಕ ಕ್ಷಣ ನೆರೆದಿದ್ದವರ ಮನಗಳಲ್ಲಿ ಅಚ್ಚಳಿಯದೆ ಉಳಿಯಿತು. ಈ ಕೋರ್ಸ್ ಗಾಗಿ ದಾಖಲಾತಿಗಳು ಈಗಲೂ ತೆರೆದಿವೆ. ಮೊದಲ ವರ್ಷದ ಪದವಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ನಗರದ ಮೊಟ್ಟ ಮೊದಲ ವಿಶುವಲ್ ಕಮ್ಯೂನಿಕೇಶನ್ ಬ್ಯಾಚ್ ನ ಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಬಹುದು.

- Advertisement -
spot_img

Latest News

error: Content is protected !!