Wednesday, June 3, 2026
Homeತಾಜಾ ಸುದ್ದಿಮತ್ತೆ Me Too ಸದ್ದು: ಚಿತ್ರರಂಗದ ಕಹಿ ಸತ್ಯ ಅನಾವರಣಗೊಳಿಸಿದ ನಟಿ ಆಶಿತಾ

ಮತ್ತೆ Me Too ಸದ್ದು: ಚಿತ್ರರಂಗದ ಕಹಿ ಸತ್ಯ ಅನಾವರಣಗೊಳಿಸಿದ ನಟಿ ಆಶಿತಾ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿತಾ ಮೀಟೂ ಬಗ್ಗೆ ಒಂದಷ್ಟು ಶಾಕಿಂಗ್ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ರಘುರಾಮ್ ಅವರ ಯೂಬ್ಯೂಬ್ ವಾಹಿನಿ ಜೊತೆ ಮಾತನಾಡಿದ ನಟಿ ಆಶಿತಾ ಸಾಕಷ್ಟು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ. ಸಿನಿಮಾರಂಗದಿಂದ ದೂರ ಉಳಿಯಲು ಪ್ರಮುಖ ಕಾರಣ ಮೀಟೂ ಎಂದು ನೇರವಾಗಿ ಹೇಳಿದ್ದಾರೆ.

ಇಷ್ಟೆಲ್ಲ ಹೇಳಿರುವ ಅವರು ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಬಾಯಿ ಬಿಟ್ಟಿಲ್ಲ. ಇದರ ಜೊತೆ ತಮ್ಮ ಮದುವೆ ಮುರಿದು ಬಿದ್ದಿದ್ದರ ಬಗ್ಗೆಯೂ ಮಾತನಾಡಿದ್ದಾರೆ.

ಆಕಾಶ್’, ‘ತವರಿನ ಸಿರಿ’, ‘ಬಾ ಬಾರೋ ರಸಿಕ’, ‘ರೋಡ್ ರೋಮಿಯೋ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಆಶಿತಾ ಫೇಮಸ್ ಆಗಿದ್ದರು. ‘ರೋಡ್ ರೋಮಿಯೋ’ ಚಿತ್ರದ ಬಳಿಕ ಅವರು ಬಣ್ಣದ ಲೋಕದಲ್ಲಿ ಹೆಚ್ಚಾಗಿ ಸಕ್ರಿಯವಾಗಲಿಲ್ಲ. ಅದಕ್ಕೆ ಮೀಟೂ ಪಿಡುಗು ಕಾರಣ ಎಂದು ಆಶಿತಾ ಹೇಳಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಎದುರಾದ ಎಲ್ಲ ಕಷ್ಟದ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ.

- Advertisement -

Latest News

error: Content is protected !!