Sunday, June 7, 2026
Homeಕರಾವಳಿಬಂಟ್ವಾಳ: ವೀರಕಂಬ ಗ್ರಾ.ಪಂ. ವತಿಯಿಂದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಉಚಿತ ನೋಂದಣಿ

ಬಂಟ್ವಾಳ: ವೀರಕಂಬ ಗ್ರಾ.ಪಂ. ವತಿಯಿಂದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಉಚಿತ ನೋಂದಣಿ

- Advertisement -
- Advertisement -

ಬಂಟ್ವಾಳ: ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಅಭಾ ಕಾರ್ಡ್ )ಉಚಿತ ನೋಂದಣಿ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು. ವೀರಕಂಬ ಗ್ರಾಮದ ಅಶ್ಮಿ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರದ ಸುಜಾತಾ ಮತ್ತು ಶೈಲಜಾ ಪಜೀರು ನೋಂದಣಿ ಪ್ರಕ್ರಿಯೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ,  ಸದಸ್ಯರಾದ ಸಂದೀಪ್ ಪೂಜಾರಿ, ಜಯಪ್ರಸಾದ್ ಶೆಟ್ಟಿ , ಜಯಂತಿ ಜನಾರ್ಧನ ಪೂಜಾರಿ , ಮೀನಾಕ್ಷಿ ಸುನಿಲ್ ನಾಯ್ಕ್ , ಉಮಾವತಿ ದಾಮೋದರ ಸಪಲ್ಯ, ಅರೋಗ್ಯ ಸಿ ಎಚ್ ಓ ಆದ ಹರ್ಷಿತ, ಕಿರಿಯ ಅರೋಗ್ಯ ಸಂರಕ್ಷಣಾಧಿಕಾರಿ ಜ್ಯೋತಿ ಕೆ ಎನ್,  ಆಶಾ ಕಾರ್ಯಕರ್ತೆಯರಾದ ಕೋಮಲಾಕ್ಷಿ, ಲೀಲಾವತಿ, ಸ್ನೇಹಲತಾ, ಮತ್ತು ಪಂಚಾಯತ್ ಸಿಬ್ಬಂದಿ, ಉಪಸ್ಥಿತರಿದ್ದರು.

- Advertisement -

Latest News

error: Content is protected !!