Saturday, June 6, 2026
Homeಕರಾವಳಿಬೆಳ್ತಂಗಡಿ:ಬೆಳಾಲಿನ ಪಾನಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

ಬೆಳ್ತಂಗಡಿ:ಬೆಳಾಲಿನ ಪಾನಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ  ಬೆಳಾಲು ಗ್ರಾಮದ ಪಾನಡ್ಕ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ನಡೆಯಿತು. ಈ ಕಾರ್ಯಕ್ರಮವನ್ನು ಬೆಳಾಲು ಗ್ರಾಮ ಪಂಚಾಯತ್  ಸದಸ್ಯೆ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಿಸಿದರು .

 ಬೆಳಾಲು ಗ್ರಾಮದ ಸಿಹೆಚ್ಓ ತೇಜಾವತಿ  ಅವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪಾನಡ್ಕ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ನಿಶಾ ನಿತಿನ್ ಬನಂದೂರ್ ,ಆಶಾ ಕಾರ್ಯಕರ್ತೆ ಡೀಕಮ್ಮ ಉಪಸ್ಥಿತರಿದ್ದರು.

 ಅಂಗನವಾಡಿ ಶಿಕ್ಷಕಿ ಶೈಲಜಾ ಕಾರ್ಯಕ್ರಮವನ್ನು ನಿರೂಪಿಸಿ ಸಹಾಯಕಿ ಸುಮಿತ್ರ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಹೆತ್ತವರು ತಯಾರಿಸಿ ತಂದಂತಹ ಪೌಷ್ಟಿಕ ಆಹಾರವನ್ನು  ಪ್ರದರ್ಶಿಸಲಾಯಿತು.

- Advertisement -

Latest News

error: Content is protected !!