Thursday, May 2, 2024
Homeಕರಾವಳಿವಿಟ್ಲ: ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ

ವಿಟ್ಲ: ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ

spot_img
- Advertisement -
- Advertisement -

ವಿಟ್ಲ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ  ಪೆರ್ನೆ ವಲಯದ ಕೆದಿಲ ಬಿ ಒಕ್ಕೂಟ ಹಾಗೂ ಮಧುರ ಮತ್ತು ಜ್ಞಾನ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ಶ್ರೀ ದೇವಿ ಭಜನಾ ಮಂದಿರ ಕೆದಿಲದಲ್ಲಿ ನಡೆಯಿತು.

ಕಾರ್ಯಕ್ರಮವನ್ನು   ಕೆದಿಲ ಪಂಚಾಯತ್ ಅಧ್ಯಕ್ಷರಾದ ಜಯಂತಿ ಡಿ ಶೆಟ್ಟಿ ಯವರು ಉದ್ಘಾಟಿಸಿದರು. ಈ ವೇಳೆ ಶ್ರೀ ಧನ್ವಂತರಿ ಪೂಜೆಯ ಮಹತ್ವ ದ ಬಗ್ಗೆ ಅಶ್ವಿನಿ ಕೋಡಿಬೈಲ್ ರವರು ಧಾರ್ಮಿಕ ಉಪನ್ಯಾಸ ನೀಡಿದರು.

 ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ  ಸವಿತಾ ಎಸ್ ಭಟ್ ಅಡ್ವಾಯಿ ಅವರು ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನ ಎಂಬ ಕುರಿತು ಮಾಹಿತಿ  ನೀಡಿದರು. ಕಾರ್ಯಕ್ರಮದಲ್ಲಿ  ವಿಟ್ಲ ತಾಲೂಕು  ಯೋಜನಾಧಿಕಾರಿ  ಚೆನ್ನಪ್ಪ ಗೌಡ,  ಪೆರ್ನೆ ವಲಯಾಧ್ಯಕ್ಷ  ರಾಬರ್ಟ್  ಫರ್ನಾಂಡೀಸ್, ಕೇಶವ ನಾಯ್ಕ ಬಡೆಕ್ಕಿಲ,  ಪುಷ್ಪ ರಾಜ್ ಹೆಗ್ಡೆ ಸತ್ತಿಕ್ಕಲ್ಲು ,ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ತರಬೇತಿ ಸಹಾಯಕರು ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಸದಸ್ಯರು ತಯಾರಿಸಿದ ಸಿರಿಧಾನ್ಯ ಖಾದ್ಯಗಳು, ಸವಿತ ಎಸ್ ಭಟ್  ಅಡ್ವಾಯಿ ಅವರ ಬರೆದ ಆರೋಗ್ಯದ ಪುಸ್ತಕಗಳು ,ಸಿರಿಧಾನ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಸೇವಾ ಪ್ರತಿನಿಧಿ ಜಯಂತಿ ವರದಿ ವಾಚಿಸಿದರು. ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ವಂದಿಸಿದರು. ಪ್ರಗತಿ ಬಂಧು ತಂಡದ ಸದಸ್ಯರಾದ  ಕೇಶವ ಕೆದಿಲ  ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!