Saturday, June 6, 2026
Homeತಾಜಾ ಸುದ್ದಿಕಡಬದಲ್ಲಿ ದೇವಸ್ಥಾನ ಮತ್ತು ಸಾರಾಯಿ ಅಂಗಡಿಗೆ ಹೋಗುವುದು ಒಂದೇ ಎಂದು ಸ್ಟೇಟಸ್ ಹಾಕಿಕೊಂಡಎಸ್.ಡಿ.ಪಿ.ಐ ಕಾರ್ಯಕರ್ತ; ಕಡಬ...

ಕಡಬದಲ್ಲಿ ದೇವಸ್ಥಾನ ಮತ್ತು ಸಾರಾಯಿ ಅಂಗಡಿಗೆ ಹೋಗುವುದು ಒಂದೇ ಎಂದು ಸ್ಟೇಟಸ್ ಹಾಕಿಕೊಂಡಎಸ್.ಡಿ.ಪಿ.ಐ ಕಾರ್ಯಕರ್ತ; ಕಡಬ ವಿ.ಹಿಂ.ಪ ವತಿಯಿಂದ ದೂರು

- Advertisement -
- Advertisement -

ಕಡಬ; ದೇವಸ್ಥಾನ ಮತ್ತು ಸಾರಾಯಿ ಅಂಗಡಿಗೆ ಹೋಗುವುದು ಒಂದೇ ಎಂದು ಸ್ಟೇಟಸ್ ಹಾಕಿಕೊಂಡಿದ್ದ   ಎಸ್.ಡಿ.ಪಿ.ಐ ಯಲ್ಲಿ ಗುರುತಿಸಿಕೊಂಡಿರುವ ವಿಕ್ಟರ್ ಮಾರ್ಟಿಸ್ ಎಂಬಾತನ ವಿರುದ್ಧ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಟೇಟಸ್ ನಿಂದ ಹಿಂದೂಗಳ ಭಾವನೆಗೆ ನೋವಾಗಿದೆ ಎಂದು ಕಡಬ ವಿಶ್ವ ಹಿಂದೂ ಪರಿಷತ್ ಠಾಣೆಗೆ ದೂರು ನೀಡಿದ  ನೀಡಿದ ಬೆನ್ನಲ್ಲೇ   ಸ್ಟೇಟಸ್ ಡಿಲಿಟ್ ಮಾಡಿ ಮಾರ್ಟಿಸ್  ಅವರು ಕ್ಷಮೆಯಾಚಿಸುವ ಸ್ಟೇಟಸ್ ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ..

ದೂರು ನೀಡುವ ವೇಳೆ ಹಿಂದೂ ಸಂಘಟನೆಯ ಪ್ರಮುಖರಾದ ವಾಸುದೇವ ಕೊಳ್ಳೆಸಾಗು, ಸಂತೋಷ್ ಕುಮಾರ್ ಕೊಡಿಬೈಲು, ಪ್ರಮೋದ್ ರೈ, ಗಿರೀಶ್ ಎ.ಪಿ. ಪ್ರಕಾಶ್ ಎನ್ .ಕೆ.ರಘುರಾಮ ನಾಯ್ಕ್, ಮಾಧವ ಕೋಲ್ಪೆ, ಸೀತಾರಾಮ ಗುರುಕೃಪಾ, ಲಿಂಗಪ್ಪ ದೊಡ್ಡಕೊಪ್ಪ, ಸದಾನಂದ, ಜಿನಿತ್ ಕುಮಾರ್, ಗಣೇಶ್ ಮೀನಾಡಿ, ತಿಲಕ್ ರೈ, ಮನೋಜ್ ಖಂಡಿಗ ಮೊದಲಾದವರು ಇದ್ದರು.

- Advertisement -

Latest News

error: Content is protected !!