Friday, June 5, 2026
Homeಕರಾವಳಿಟ್ರು ಚೋಕೋ ಆಂಡ್ ನಟ್ಸ್ ನ ನೂತನ ಮಳಿಗೆ ಮಂಗಳೂರಿನ ಬಲ್ಮಠದಲ್ಲಿ ಶುಭಾರಂಭ

ಟ್ರು ಚೋಕೋ ಆಂಡ್ ನಟ್ಸ್ ನ ನೂತನ ಮಳಿಗೆ ಮಂಗಳೂರಿನ ಬಲ್ಮಠದಲ್ಲಿ ಶುಭಾರಂಭ

- Advertisement -
- Advertisement -

ಮಂಗಳೂರು; ಟ್ರು ಚೋಕೋ ಆಂಡ್ ನಟ್ಸ್ ನ ನೂತನ ಮಳಿಗೆ ಮಂಗಳೂರಿನ ಬಲ್ಮಠದಲ್ಲಿ ಶುಭಾರಂಭಗೊಂಡಿದೆ. ಮಂಗಳೂರು ಶಾಸಕ ಯುಟಿ ಖಾದರ್, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ರಘು ಸಾಲ್ಯಾನ್  ನೂತನ ಮಳಿಗೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಯುಟಿ ಖಾದರ್, ಪ್ರಯತ್ನಪಟ್ಟರೆ ಮಹಿಳೆಯರು ಉನ್ನತ ಮಟ್ಟಕ್ಕೆ ಏರಬಹುದು ಎಂಬುದಕ್ಕೆ ಟ್ರು ಚೋಕೋ ಆಂಡ್ ನಟ್ಸ್ ನ ಮುಖ್ಯಸ್ಥರಾದ ತಂಝಿಯಾ ಖಾನ್, ವಸೀಮ್ ಶೇಖ್ ಎಂಬ ಯಶಸ್ವಿ ಮಹಿಳೆಯರೇ ಉದಾಹರಣೆ ಎಂದರು. ಇವರು ಪ್ರತಿಯೊಬ್ಬ ಯುವಕ ಯುವತಿಯರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ಬಳಿಕ ಮಾತನಾಡಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಈ ವೇಳೆ ಸಂಸ್ಥೆಯ ಪಾಲುದಾರೆ ತಂಝಿಯಾ ಖಾನ್ ಮಾತನಾಡಿ, ಟ್ರು ಚೋಕೋ ಆಂಡ್ ನಟ್ಸ್ ಎರಡನೇ ಶಾಖೆಯಾಗಿದ್ದು ಮೊದಲ ಶಾಖೆ ಮಡಿಕೇರಿಯಲ್ಲಿ ಯಶಸ್ವಿ ಉದ್ಯಮ ಕಂಡಿದೆ. ಇದೀಗ ಮಂಗಳೂರಿನಲ್ಲಿ ದ್ವಿತೀಯ ಮಳಿಗೆ ತೆರಯುವ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಮಳಿಗೆ ಮಾಡುವ ಇಚ್ಚೆ ಇದೆ. ಇದಕ್ಕೆ ಮಂಗಳೂರಿನ ಜನರ ಸಹಕಾರ‌ ಅಗತ್ಯ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಮುಜೀಬುರ್ರಹ್ಮಾನ್, ಶೌಖತ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!