Thursday, June 4, 2026
Homeಉತ್ತರ ಕನ್ನಡಉಡವನ್ನು ನುಂಗಲು ಯತ್ನಿಸಿ ವಿಫಲವಾದ ಕಾಳಿಂಗ ಸರ್ಪ

ಉಡವನ್ನು ನುಂಗಲು ಯತ್ನಿಸಿ ವಿಫಲವಾದ ಕಾಳಿಂಗ ಸರ್ಪ

- Advertisement -
- Advertisement -

ಶಿರಸಿ: ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಯಾಣ ಕ್ರಾಸ್ ಸಮೀಪ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಕಾಳಿಂಗ ಸರ್ಪ ಉಡವನ್ನು ನುಂಗಲು ಪ್ರಯತ್ನಿಸಿ ವಿಫಲವಾಗಿದೆ.

ಉಡದ ಗಾತ್ರವೂ ದೊಡ್ಡದಾಗಿದ್ದು ಮತ್ತು ಬಂಡೆಗೆ ಉಡದ ಬಾಲ ಸಿಲುಕಿ ಹಾಕಿಕೊಂಡಿದ್ದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲಾಗದೇ ಅರ್ಧ ನುಂಗಿದ್ದ ಉಡವನ್ನು ವಾಪಸ್ ಹೊರಕ್ಕೆ ಹಾಕಿದೆ. ಮತ್ತೊಂದೆಡೆ ಕಾಳಿಂಗ ಸರ್ಪದ ಬೇಟೆಯಿಂದ ಉಡವೂ ಸಾವನ್ನಪ್ಪಿದೆ.

ಸ್ಥಳೀಯ ವ್ಯಕ್ತಿಯೊಬ್ಬರಿಗೆ ಉಡವನ್ನು ನುಂಗುತ್ತಿರುವ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದ್ದು ತಮ್ಮ ಮೊಬೈಲ್ ಫೋನ್ ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

- Advertisement -

Latest News

error: Content is protected !!