Wednesday, June 3, 2026
Homeತಾಜಾ ಸುದ್ದಿಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂ ರಾಜು ನಿಧನ

ಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂ ರಾಜು ನಿಧನ

- Advertisement -
- Advertisement -

ಹೈದರಾಬಾದ್: ಟಾಲಿವುಡ್ ರೆಬೆಲ್ ಸ್ಟಾರ್ ಉಪ್ಪಾಲಪಟ್ಟಿ ವೆಂಕಟ ಕೃಷ್ಣಂ‌ರಾಜು ನಿಧನರಾಗಿದ್ದಾರೆ.

ಇಂದು ಬೆಳಗ್ಗೆ 3.25ರ ವೇಳೆಗೆ ಹೈದರಾಬಾದ್ ನಲ್ಲಿ ಕೃಷ್ಣಂರಾಜು ಕೊನೆಯುಸಿರೆದಿದ್ದಾರೆ.

ನಟ, ರಾಜಕಾರಣಿ, ಛಾಯಾಗ್ರಾಹಕ ಕೂಡಾ ಆಗಿದ್ದ 83 ವರ್ಷದ ಕೃಷ್ಣಂ ರಾಜು, ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕೃಷ್ಣಂ ರಾಜು ಸೇವೆ ಸಲ್ಲಿಸಿದ್ದರು.

ನೂರಕ್ಕೂ ಹೆಚ್ಚು ತೆಲುಗು ಚಲನಚಿತ್ರಗಳಲ್ಲಿ ನಟಿಸಿರುವ ಕೃಷ್ಣಂ ರಾಜು ಕನ್ನಡದ ಸಿಂಹದಮರಿ ಚಿತ್ರದಲ್ಲಿ ಕೂಡಾ ಅಭಿನಯಿಸಿದ್ದಾರೆ.

ಕೃ಼ಷ್ಣಂ ರಾಜು, ಖ್ಯಾತ ತೆಲುಗು ನಟ ಪ್ರಭಾಸ್ ಅವರ ದೊಡ್ಡಪ್ಪ.

- Advertisement -

Latest News

error: Content is protected !!