Tuesday, April 30, 2024
Homeತಾಜಾ ಸುದ್ದಿಮಂಗಳೂರು: ಸೆಂಟ್ರಲ್‌ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡಬೇಕು: ಬಿ.ಕೆ.ಹರಿಪ್ರಸಾದ್

ಮಂಗಳೂರು: ಸೆಂಟ್ರಲ್‌ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡಬೇಕು: ಬಿ.ಕೆ.ಹರಿಪ್ರಸಾದ್

spot_img
- Advertisement -
- Advertisement -

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿವ ವರ್ಗಗಳ ಘಟಕದ ವತಿಯಿಂದ ‘ಗುರು ಸಂದೇಶ ಯಾತ್ರೆ’ ಇಂದು ನಡೆಯಿತು. ನಾರಾಯಣ ಗುರುಗಳು ದಕ್ಷಿಣ ಕನ್ನಡ ಜಿಲ್ಲೆಗೆ 1908ರಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಬಾರಿ ಪಾದಸ್ಪರ್ಶ ಮಾಡಿದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಆರಂಭವಾದ ಯಾತ್ರೆಯು ಗುರುಗಳು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದಲ್ಲಿ ಸಂಪನ್ನವಾಯಿತು.

ಯಾತ್ರೆಯನ್ನು ಉದ್ಘಾಟಿಸಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ‘ಶಾಂತಿಪ್ರಿಯರ, ಸಹಿಷ್ಣುಗಳ ನಾಡಾಗಿದ್ದ ಮಂಗಳೂರು ಕೆಲವು ವರ್ಷಗಳಿಂದ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಶಾಂತಿ ಮಂತ್ರ ಜಪಿಸಿದ್ದ ನಾರಾಯಣ ಗುರುಗಳು ದೇವರು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ್ದರು. ನಾವೆಲ್ಲ ಒಂದಾಗಿ ಗುರುಗಳ ಸಂದೇಶವನ್ನು ಮತ್ತೆ ಸಾರಬೇಕಿದೆ’ ಎಂದರು.

ಹಾಗೇ ಇಲ್ಲಿನ ಸೆಂಟ್ರಲ್‌ ರೈಲ್ವೆ ನಿಲ್ದಾಣಕ್ಕೆ ಗುರುಗಳ ಹೆಸರು ಇಡಬೇಕು. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.

- Advertisement -
spot_img

Latest News

error: Content is protected !!