Saturday, June 6, 2026
Homeಕರಾವಳಿಮಂಗಳೂರು:  ನಕಲಿ ಪಾಸ್‌ ಪೋರ್ಟ್‌ ಬಳಸಿ ದುಬೈಗೆ ತೆರಳಲು ಯತ್ನ; ತಲೆ ಮರೆಸಿಕೊಂಡ ಆರೋಪಿಯ ಬಂಧನ

ಮಂಗಳೂರು:  ನಕಲಿ ಪಾಸ್‌ ಪೋರ್ಟ್‌ ಬಳಸಿ ದುಬೈಗೆ ತೆರಳಲು ಯತ್ನ; ತಲೆ ಮರೆಸಿಕೊಂಡ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: 2008ರ ಅ. 5ರಂದು ನಕಲಿ ಪಾಸ್‌ ಪೋರ್ಟ್‌ ಬಳಸಿ ದುಬೈಗೆ ತೆರಳಲು ಯತ್ನಿಸಿದ್ದ ವ್ಯಕ್ತಿಯನ್ನು ಇಮಿಗ್ರೇಷನ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅವರ ದೂರಿನಂತೆ ಕಾಸರಗೋಡಿನ ಮಮ್ಮುಂಞ ಯಾನೆ ಮುಹಮ್ಮದ್‌ ಕುಂಞ (53) ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಆತ ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಆತ ಕೇರಳದಲ್ಲಿ ವಿಳಾಸವನ್ನು ಬದಲಿಸುತ್ತಾ ತಪ್ಪಿಸಿಕೊಂಡಿದ್ದ. ಕೇರಳ ರಾಜ್ಯದ ಹೊಸದುರ್ಗಾ ಜಿಲ್ಲೆಯ ಹರಿಪುರಂ ಪುಲ್ಲೂರಿನ ಆತನ ಇರುವಿಕೆಯನ್ನು ಪತ್ತೆ ಹಚ್ಚಿದ್ದ ಬಜಪೆ ಪೊಲೀಸರು ತನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!