Sunday, May 19, 2024
Homeತಾಜಾ ಸುದ್ದಿವೈದ್ಯನೆಂದು ಹೇಳಿಕೊಂಡು ಚಿನ್ನದ ಅಂಗಡಿಗೆ ಬಂದು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಆಸಾಮಿ

ವೈದ್ಯನೆಂದು ಹೇಳಿಕೊಂಡು ಚಿನ್ನದ ಅಂಗಡಿಗೆ ಬಂದು ಕಳ್ಳತನ ಮಾಡಿ ಸಿಕ್ಕಿ ಬಿದ್ದ ಆಸಾಮಿ

spot_img
- Advertisement -
- Advertisement -

ಬೆಂಗಳೂರು: ತಾನು ವೈದ್ಯನೆಂದು ಹೇಳಿಕೊಂಡು ಚಿನ್ನದ ಅಂಗಡಿಗೆ ಬಂದು ಆಸಾಮಿಯೊಬ್ಬ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನ ಜಯನಗರದ ಎಂಟನೇ ಬ್ಲಾಕ್ ನ ಚಿನ್ನದ ಅಂಗಡಿಯೊಂದರಲ್ಲಿ ನಡೆದಿದೆ.

ಚಿನ್ನದ ಅಂಗಡಿ ಬಂದ ಆರೋಪಿ ಅಪೋಲೋ ಆಸ್ಪತ್ರೆಯ ವೈದ್ಯನೆಂದು ಪರಿಚಯ ಮಾಡಿಕೊಂಡಿದ್ದಾನೆ. ಮೊದಲಿಗೆ ಅಂಗಡಿಯಲ್ಲಿ ಬೆಳ್ಳಿಯ ನಾಣ್ಯ ಖರೀದಿಸಿದ ರಾಹುಲ್,ಬಳಿಕ ತನ್ನ‌ ತಂಗಿ ಮದುವೆಗೆ ಚಿನ್ನ ಬೇಕು ಎಂದು ಹೇಳಿ 32 ಗ್ರಾಂ‌ ತೂಕದ ಚಿನ್ನದ ನೆಕ್ಲೆಸ್, 75 ಗ್ರಾಂ ತೂಕದ ಲಾಂಗ್ ಚೈನ್, 22 ಗ್ರಾಂ ತೂಕದ ಬ್ರಾಸ್ಲೆಟ್ ತೆಗೆದುಕೊಂಡಿದ್ದಾನೆ.

ನಂತರ ತನ್ನ ಸಂಬಂಧಿ ಹಣ ತರುತ್ತಾರೆಂದು ನಂಬಿಸಿದ ಆರೋಪಿ ಸುಮಾರು‌ 2 ಗಂಟೆ ಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದಾನೆ. ಆಗ ತಾನು ಕದಿಯಬಹುದಾದ ವಸ್ತುಗಳ ಬಗ್ಗೆ ಸ್ಕೆಚ್ ಹಾಕಿದ್ದಾನೆ. ನಂತರ ಬೆಳ್ಳಿಯ ಫೋಟೋ ಫ್ರೇಮ್ ಬೇಕು ಎಂದು ಕೇಳಿದ್ದ. ಅಂಗಡಿಯವರು ಫ್ರೇಮ್ ತರಲು ಒಳಗೆ ಹೋದಾಗ ರ್ಯಾಕ್​​ನಲ್ಲಿಟ್ಟ ಒಡವೆ ಬಾಕ್ಸ್ ಸಮೇತ ಎಸ್ಕೇಪ್ ಆಗಿದ್ದಾನೆ.ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!