Sunday, June 7, 2026
Homeಕರಾವಳಿಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ರಕ್ಷಿಸಿದ ಪೊಲೀಸರು

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ರಕ್ಷಿಸಿದ ಪೊಲೀಸರು

- Advertisement -
- Advertisement -

ಕಾಸರಗೋಡು : ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಮೂವರು ಮಕ್ಕಳನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿದ ಘಟನೆ ಕಾಸರಗೋಡಿನ ಬೇಕಲ ಠಾಣಾ ವ್ಯಾಪ್ತಿಯ ಚೆಂಬರಿಕದಲ್ಲಿ ನಡೆದಿದೆ.

ಮೇಲ್ಪರಂಬ ನಿವಾಸಿ ಮಹಿಳೆ ಮತ್ತು ಮೂವರು ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ತನಿಖೆ ನಡೆಸಿದಾಗ ಮಹಿಳೆ ಮಕ್ಕಳೊಂದಿಗೆ ಆಟೋ ರಿಕ್ಷಾವೊಂದರಲ್ಲಿ  ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಆಟೋ ಚಾಲಕನ ಮೊಬೈಲ್ ನಂಬ್ರಕ್ಕೆ ಸಂಪರ್ಕಿಸಿದ ಪೊಲೀಸರು ವಿಚಾರಿಸಿದಾಗ ಚೆಂಬರಿಕ ಬಳಿ ಇಳಿದಿರುವುದಾಗಿ ಮಾಹಿತಿ ಸಿಕ್ಕಿದೆ. ಇದರಂತೆ ಪೊಲೀಸರು ಕಿಯೂರಿನಲ್ಲಿರುವ ಉಪಠಾಣೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಶೋಧ ನಡೆಸಿದ್ದು, ಚೆಂಬರಿಕ ಕಡಲ ಕಿನಾರೆಯ ಮೇಲೇರಿ ಸಮುದ್ರಕ್ಕೆ ಹಾರಲು ಯತ್ನಿಸುದ್ದ, ಮಹಿಳೆ ಹಾಗೂ ಮೂವರು ಮಕ್ಕಳನ್ನು ಪೊಲೀಸರು ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.

 

- Advertisement -

Latest News

error: Content is protected !!