Saturday, June 6, 2026
Homeಕರಾವಳಿಸುಳ್ಯ: ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಳ್ಳಾರೆಯ ವ್ಯಕ್ತಿ ಪತ್ತೆ

ಸುಳ್ಯ: ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಳ್ಳಾರೆಯ ವ್ಯಕ್ತಿ ಪತ್ತೆ

- Advertisement -
- Advertisement -

ಸುಳ್ಯ: ಪ್ರಧಾನಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ತೆರಳಿ ನಾಪತ್ತೆಯಾಗಿದ್ದ  ಐವರ್ನಾಡಿನ ವ್ಯಕ್ತಿ ನಾಲ್ಕು  ದಿನದ ಬಳಿಕ ಪತ್ತೆಯಾಗಿದ್ದಾರೆ.

ಐವರ್ನಾಡು ಗ್ರಾಮದ   ಸದಾಶಿವ ಪಾಲೆಪ್ಪಾಡಿ ಎಂಬವರು ಸೆ.2 ರಂದು  ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದರು.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇಂದು  ಬೆಳ್ಳಾರೆಯಲ್ಲಿ ಪತ್ತೆಯಾಗಿದ್ದು   ಠಾಣೆಗೆ ಹಾಜರಾಗಿ ಬಳಿಕ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ ಕಲ್ಲಗದ್ದೆ ,ಸಿಬ್ಬಂದಿ ಕುಮಾರ ಕಟ್ಟತ್ತಾರು ,ಪ್ರಜ್ವಲ್ ರವರೊಂದಿಗೆ ಮನೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ.  ಮಂಗಳೂರಿನಿಂದ ತನ್ನ ಸ್ನೇಹಿತನ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

- Advertisement -

Latest News

error: Content is protected !!