Thursday, June 4, 2026
Homeಕರಾವಳಿಉಡುಪಿಕಾರ್ಕಳ: ಮಾಳ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿದ ಮಲ್ಲಿಕಾ...

ಕಾರ್ಕಳ: ಮಾಳ ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿದ ಮಲ್ಲಿಕಾ ಶೆಟ್ಟಿ

- Advertisement -
- Advertisement -

ಕಾರ್ಕಳ : ಮಾಳ ಗ್ರಾಪಂ ಅಧ್ಯಕ್ಷೆ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಿದ್ದು,  ಮಲ್ಲಿಕಾ ಶೆಟ್ಟಿ ಅಧ್ಯಕ್ಷ ಸ್ಥಾನ ಕೆಳಗಿಳಿದಿದ್ದಾರೆ..

2ನೇ ಬಾರಿ ಸದಸ್ಯೆಯಾಗಿರುವ ಮಲ್ಲಿಕಾ ಶೆಟ್ಟಿ 2021ರ ಫೆಬ್ರವರಿಯಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಗ್ರಾಪಂಗೆ ಸಂಬಂಧಿಸಿದಂತೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದ ಮಲ್ಲಿಕಾ ಶೆಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಉಪಾಧ್ಯಕ್ಷ ಅಶೋಕ್ ಬರ್ವೆ ಸೇರಿದಂತೆ 10 ಸದಸ್ಯರು ಅರ್ಜಿ ಸಲ್ಲಿಸಿದ್ದರು. ಅದರಂತೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದು, ಮಲ್ಲಿಕಾ ಶೆಟ್ಟಿ ಪರ 4, ವಿರುದ್ಧ 10 ಮಂದಿ ಮತ ಚಲಾಯಿಸಿದ್ದಾರೆ. ಆ ಮೂಲಕ ಮಲ್ಲಿಕಾ ಶೆಟ್ಟಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.

- Advertisement -

Latest News

error: Content is protected !!