- Advertisement -
- Advertisement -
ಮಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಆರೋಪದಲ್ಲಿ ಸಾಕ್ಷಿಗಳು ಇದ್ದರೆ ಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಕಟೀಲ್, ಕಾಂಗ್ರೆಸ್ ಪಕ್ಷ ನೆರೆ ಸಂಗ್ರಹದ ಹಣದಲ್ಲೇ ಲೂಟಿ ಮಾಡಿದ 80% ಕಮಿಷನ್ ಪಕ್ಷವಾಗಿದ್ದು, ನೈತಿಕತೆ ಇದ್ರೆ ಸಾಕ್ಷಿ ಕೊಡಲಿ, ಕೆಂಪಣ್ಣನೂ ಸಾಕ್ಷಿ ಕೊಡಲಿ ಎಂದು ಹೇಳಿದ್ದಾರೆ.
ಕೆಂಪಣ್ಣ ಸುಮ್ಮನೆ ಮಾತನಾಡುವ ಬದಲು ಸಾಕ್ಷಿ ನೀಡಿದರೆ ನಾವು ನೋಡುತ್ತೇವೆ ಎಂದು ಹೇಳಿರುವ ನಳೀನ್ ಕುಮಾರ್ ಕಟೀಲ್, ಮಾಜಿ ಸಚಿವ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರ ವಿಚಾರದಲ್ಲಿ ಸರ್ಕಾರ ಈಶ್ವರಪ್ಪನವರಿಗೆ ಭದ್ರತೆ ಕೊಡುತ್ತದೆ ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರಿನ ಚಾಮರಾಜಪೇಟೆಯ ಮೈದಾನದಲ್ಲಿ ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇಬೇಕು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
- Advertisement -