Sunday, June 7, 2026
Homeಕರಾವಳಿಸುಬ್ರಹ್ಮಣ್ಯ : ಕುಮಾರಧಾರಾ ನದಿಯಲ್ಲಿ ಯುವಕ ಕಣ್ಮರೆ ಪ್ರಕರಣ: ನಾಪತ್ತೆಯಾಗಿದ್ದ ಶಿವು ಇಂದು ಶವವಾಗಿ ಪತ್ತೆ

ಸುಬ್ರಹ್ಮಣ್ಯ : ಕುಮಾರಧಾರಾ ನದಿಯಲ್ಲಿ ಯುವಕ ಕಣ್ಮರೆ ಪ್ರಕರಣ: ನಾಪತ್ತೆಯಾಗಿದ್ದ ಶಿವು ಇಂದು ಶವವಾಗಿ ಪತ್ತೆ

- Advertisement -
- Advertisement -

ಸುಬ್ರಹ್ಮಣ್ಯ : ಕುಮಾರಧಾರಾ ನದಿಯಲ್ಲಿ ಕಣ್ಮರೆಯಾಗಿದ್ದ ಬೆಂಗಳೂರು ಮೂಲದ ಶಿವು@ಸ್ವಾಮಿ ಇಂದು‌ ಸಂಜೆ  ಶವವಾಗಿ ಪತ್ತೆಯಾಗಿದ್ದಾರೆ.

ಸತತವಾಗಿ ನಾಲ್ಕು ದಿನದ ಕಾರ್ಯಾಚರಣೆ ಬಳಿಕ ಇಂದು ಸಂಜೆ ಶವ ಪತ್ತೆಯಾಗಿದೆ.ಸುಮಾರು 15 ಜನ ನುರಿತ ಈಜುಗಾರರು, ಸಮಾಜ ಸೇವಕ ರವಿಕಕ್ಕೆಪದವು,ಅಗ್ನಿಶಮಾಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಕಂದಾಯ ಅಧಿಕಾರಿಗಳು, ಗ್ರಹರಕ್ಷಕ ದಳ,ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ  ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

ಸ್ಥಳದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಗ್ರಾ. ಪಂಚಾಯತ್ ಪಿಡಿಓ ಯು. ಡಿ ಶೇಖರ್, ಸುಬ್ರಹ್ಮಣ್ಯ ಗ್ರಾ. ಪಂಚಾಯತ್ ಸದಸ್ಯರು,ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!