Saturday, June 6, 2026
Homeಕರಾವಳಿಸುಬ್ರಹ್ಮಣ್ಯ :ಕುಮಾರಧಾರ ಸ್ನಾನ ಘಟ್ಟದಲ್ಲಿ  ಯುವಕ ನಾಪತ್ತೆ ಪ್ರಕರಣ:ಇನ್ನು ಸಿಕ್ಕಿಲ್ಲ ನಾಪತ್ತೆಯಾದವನ ಸುಳಿವು

ಸುಬ್ರಹ್ಮಣ್ಯ :ಕುಮಾರಧಾರ ಸ್ನಾನ ಘಟ್ಟದಲ್ಲಿ  ಯುವಕ ನಾಪತ್ತೆ ಪ್ರಕರಣ:ಇನ್ನು ಸಿಕ್ಕಿಲ್ಲ ನಾಪತ್ತೆಯಾದವನ ಸುಳಿವು

- Advertisement -
- Advertisement -

ಸುಬ್ರಹ್ಮಣ್ಯ : ಕುಮಾರಧಾರ ಸ್ನಾನ ಘಟ್ಟದಲ್ಲಿ ನಾಪತ್ತೆಯಾದ ಬೆಂಗಳೂರಿನ ಯುವಕ ಶಿವು ಬಗ್ಗೆ ಇನ್ನೂ ಸುಳಿವು‌ ಪತ್ತೆಯಾಗಿಲ್ಲ.

ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗಿದ ಪರಿಣಾಮ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.

ಸುಮಾರು 15 ಜನ ನುರಿತ ಈಜುಗಾರರು, ಅಗ್ನಿಶಾಮಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಿಬ್ಬಂದಿ, ಸುಬ್ರಹ್ಮಣ್ಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು, ಗೃಹರಕ್ಷಕ ದಳ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಸೇರಿ ಇಂದು ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ಸತತವಾಗಿ 12ಗಂಟೆಗಳ ಕಾರ್ಯಾಚರಣೆ  ನಡೆಸಿದ್ದಾರೆ. ಆದರೆ ಯಾವುದೇ ಸುಳಿವು‌ ಲಭ್ಯವಾಗಿಲ್ಲ. ಯುವಕ‌ ಸಾವಿನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ನಾಳೆ ಬೆಳಿಗ್ಗೆಯಿಂದಲೇ ಪುನಃ ಕಾರ್ಯಾಚರಣೆ ಪ್ರಾರಂಭವಾಗಲಿದೆ.

- Advertisement -

Latest News

error: Content is protected !!