Wednesday, May 15, 2024
Homeಕರಾವಳಿಸುಳ್ಯ: ಗೂನಡ್ಕ ಶ್ರೀ ಕೃಷ್ಣ ಗೆಳೆಯರ ಬಳಗದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಸುಳ್ಯ: ಗೂನಡ್ಕ ಶ್ರೀ ಕೃಷ್ಣ ಗೆಳೆಯರ ಬಳಗದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

spot_img
- Advertisement -
- Advertisement -

ಸುಳ್ಯ: ಗೂನಡ್ಕ ಶ್ರೀ ಶಾರದ ಶಾಲೆ ಆಟದ ಮೈದಾನದಲ್ಲಿ  ಶ್ರೀ ಕೃಷ್ಣ ಗೆಳೆಯರ ಬಳಗ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  ಆಟೋಟ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್  ರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. 

ಈ ಸಂಧರ್ಭದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗದ ಅಧ್ಯಕ್ಷರಾದ ವರದರಾಜ್ ಸಂಕೇಶ ,ಸಂಪಾಜೆ ಕೃಷಿ  ಪತ್ತಿನ ಸರಕಾರಿ ಸಂಘ ಅಧ್ಯಕ್ಷರಾದ ಸೋಮಶೇಖರ್ ಕ್ಯೊಂಗಾಜೆ, ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ , ಲೋಕನಾಥ ಎಸ್.ಪಿ ಸಂಚಾಲಕರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ , ಜಿ.ರಾಮಚಂದ್ರ ಅಧ್ಯಕ್ಷರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ,ಚಿದಾನಂದ ಮಾಸ್ಟರ್ , ಗೋವರ್ಧನ ಸನತ್ ಎಸ್ .ಪಿ,  , ಮುಂತಾದವರು ಉಪಸ್ಥಿತರಿದ್ದರು .

ಉದ್ಘಾಟನಾ ಬಳಿಕ ಮಡಿಕೆ ಹೊಡೆಯುವುದು ,ಗುಂಡೆಸೆತ, ವಿಷವರ್ತುಲ , ಅಂಗಿಗೆ ಗುಬ್ಬಿ ಹಾಕಿ ಓಡುವುದು , ಸೂಜಿಗೆ ದಾರ ಹಾಕಿ ಓಡುವುದು ,ಶ್ರೀ ಕೃಷ್ಣ ಭಕ್ತಿ ಗೀತೆ ಹಾಡುವುದು ಕಬಡ್ಡಿ , ಹಗ್ಗಜಗ್ಗಾಟ ,  ,  ಪುಟಾಣಿಗಳಿಗೆ ಕೃಷ್ಣ ವೇಶ ಧರಿಸುವುದು ,ಬಾಲ್ ಎಸೆತ ಮುಂತಾದ ಸ್ಪರ್ಧೆಗಳು ಅದ್ದೂರಿಯಾಗಿ ನಡೆಯಿತು.

- Advertisement -
spot_img

Latest News

error: Content is protected !!