Sunday, June 7, 2026
Homeತಾಜಾ ಸುದ್ದಿಸುರತ್ಕಲ್:‌ ಇಬ್ಬರ ಮೇಲೆ ಕತ್ತಿ ಬೀಸಿ ಹಲ್ಲೆ: ಬಸ್ಸಿಗೆ ಕಲ್ಲು ತೂರಾಟ: ಆರೋಪಿ ಪೊಲೀಸರ ವಶ

ಸುರತ್ಕಲ್:‌ ಇಬ್ಬರ ಮೇಲೆ ಕತ್ತಿ ಬೀಸಿ ಹಲ್ಲೆ: ಬಸ್ಸಿಗೆ ಕಲ್ಲು ತೂರಾಟ: ಆರೋಪಿ ಪೊಲೀಸರ ವಶ

- Advertisement -
- Advertisement -

ಸುರತ್ಕಲ್: ವ್ಯಕ್ತಿಯೊಬ್ಬ ಇಬ್ಬರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ, ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಸುರತ್ಕಲ್‌ನ  ಕಾನಾ ಸಮೀಪ ನಡೆದಿದೆ.

ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದು, ಆರೋಪಿಯು ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ತಿಳಿದು ಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

.

- Advertisement -

Latest News

error: Content is protected !!