Thursday, June 4, 2026
Homeತಾಜಾ ಸುದ್ದಿಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ: ನನಗೆ ಈ ಒಳ ಒಪ್ಪಂದಗಳ ಅನುಭವ ಇಲ್ಲ:...

ಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ: ನನಗೆ ಈ ಒಳ ಒಪ್ಪಂದಗಳ ಅನುಭವ ಇಲ್ಲ: ಡಿ.ಕೆ.ಶಿವಕುಮಾರ್

- Advertisement -
- Advertisement -

ನವದೆಹಲಿ: ಸಚಿವ ಶ್ರೀ ರಾಮುಲು ಅವರು, ಸಿದ್ದರಾಮಯ್ಯ ಸಿಎಂ ಆಗ್ಬೇಕು ಅಂತ ಬಯಸುವವರಲ್ಲಿ ನಾನು ಒಬ್ಬ ಎಂದು ಹೇಳಿಕೆ ಕೊಟ್ಟಿದ್ರು. ಈ ಹೇಳಿಕೆ ಬಗ್ಗೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಶ್ರೀರಾಮುಲು ಮಧ್ಯೆ ಯಾವ ಒಪ್ಪಂದ ನಡೆದಿದೆ ಎಂದು ನನಗೆ ಗೊತ್ತಿಲ್ಲ ಹೇಳಿದ್ದಾರೆ.

ಸಚಿವ ಶ್ರೀರಾಮುಲು ಹೇಳಿಕೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ನನಗೆ ಈ ಒಳ ಒಪ್ಪಂದಗಳ ಅನುಭವ ಇಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಶ್ರೀರಾಮುಲು ಹೇಳಿದ್ದಾರೆ ಸಂತೋಷ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಆಯ್ತಲ್ಲ, ಇದು ಸಂತೋಷ ಅಲ್ವ?, ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡುತ್ತಿರುವುದು ಖುಷಿ ವಿಚಾರವಾಗಿದ್ದು, ಶ್ರೀರಾಮುಲು ಮತ್ತು ಮಾಧುಸ್ವಾಮಿಗೆ ನಾನು ಅಭಿನಂದಿಸುತ್ತೇನೆ ಎಂದು ತಿರುಗೇಟು ನೀಡಿದರು.

- Advertisement -

Latest News

error: Content is protected !!