Monday, June 8, 2026
Homeಕರಾವಳಿಉಡುಪಿ: ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ಹಾನಿ

ಉಡುಪಿ: ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ಹಾನಿ

- Advertisement -
- Advertisement -

ಉಡುಪಿ: ಬಾಡಿಗೆ ಮನೆಯೊಂದಕ್ಕೆ ಮನೆಗೆ ನುಗ್ಗಿ ಆವಾಚ್ಯ ಶಬ್ದಗಳಿಂದ ನಿಂದಿಸಿ, ಕಲ್ಲು ಎಸೆದು ಹಾನಿ ಮಾಡಿರುವ ಘಟನೆ ಕಾಪು ತಾಲೂಕಿನ ಪಾದೂರು ಗ್ರಾಮದ ಕೊಲ್ಲಬೆಟ್ಟು ಎಂಬಲ್ಲಿ ನಡೆದಿದೆ.

ವಿನೋದ್‌ ಕುಮಾರ್‌ ಅವರ ಬಾಡಿಗೆ ಮನೆಗೆ ಏಕಾಏಕಿ ನುಗ್ಗಿದ ಮೂವರು, ವಿನೋದ್‌ ಕುಮಾರ್‌ ಅವರಿಗೆ ಹೆಲ್ಮೆಟ್‌ ನಿಂದ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.ನಂತರ ಮೂವರು ಮನೆಗೆ ಹಾನಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ವಿನೋದ್‌ ಕುಮಾರ್‌ ಐವನ್‌ ಪಿಂಟೋ, ರೊನಾಲ್ಡ್‌ ಪಿಂಟೋ ಹಾಗೂ ಅನಿಲ್‌ ನಜರತ್‌ ವಿರುದ್ಧ ಕಿಟಕಿ ಗಾಜುಗಳನ್ನು, ಮನೆಯ ಬಾಗಿಲನ್ನು ಕಲ್ಲಿನಿಂದ ಹೊಡೆದು 15,000 ನಷ್ಟವನ್ನು ಮಾಡಿದ್ದಾರೆ. ಇದರೊಂದಿಗೆ ಬೈದು ಜೀವ ಬೆದರಿಕೆ ಹಾಕಿದ್ದಾರೆಂದು ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!