Sunday, June 7, 2026
Homeಕರಾವಳಿಮೂಡಬಿದಿರೆ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮೂಡಬಿದಿರೆ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

- Advertisement -
- Advertisement -

ಮೂಡಬಿದಿರೆ:  ಅಕ್ರಮವಾಗಿ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿ ಇಲ್ಲಿನ ವಿಶಾಲನಗರ ಬಳಿ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಯುತ್ತಿದೆ.ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಪತ್‌ ಪಟೇಲ್‌, ಉಪವಲಯ ಅರಣ್ಯಾಧಿಕಾರಿಗಳಾದ ಕಾಂತರಾಜ್‌, ಪ್ರಕಾಶ್‌ ಶೆಟ್ಟಿ, ಸಂತೋಷ್‌, ವಿಕಾಸ್‌ ,ವಾಹನ ಚಾಲಕ ಜಯಪ್ರಕಾಶ್ ಭಾಗವಹಿಸಿದ್ದಾರೆ

- Advertisement -

Latest News

error: Content is protected !!