Thursday, June 4, 2026
Homeಕರಾವಳಿಸುಳ್ಯ ತಾಲೂಕಿನ ಕೆಲವೆಡೆ ಮತ್ತೆ ಕಂಪಿಸಿದ ಭೂಮಿ

ಸುಳ್ಯ ತಾಲೂಕಿನ ಕೆಲವೆಡೆ ಮತ್ತೆ ಕಂಪಿಸಿದ ಭೂಮಿ

- Advertisement -
- Advertisement -

ಸುಳ್ಯ: ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಭೂ ಕಂಪನದಿಂದಾದ ಆತಂಕದಿಂದ ಜನ ಹೊರ ಬರುವ ಮುನ್ನವೇ ಇದೀಗ ಮತ್ತೆ  ಸುಳ್ಯದ ‌ಕೆಲಭಾಗಗಳಲ್ಲಿ ಇಂದು ಸಂಜೆ ಮತ್ತೆ ಭೂಮಿ ಕಂಪಿಸಿದೆ.

ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಸಂಜೆ 6ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ, ಮರ್ಕಂಜ ಭಾಗಗಳಲ್ಲಿ ಗುಡುಗಿನಂತಹ ಶಬ್ದ ಕೇಳಿಬಂದಿದೆ. ಈಗಾಗಲೇ ಮೇಘಸ್ಛೋಟದಿಂದ ತತ್ತರಿಸಿ ಹೋಗಿರುವ ಜನರಿಗೆ ಭೂಕಂಪನ ಮತ್ತೊಂದು ಆತಂಕ ತಂದೊಡ್ಡಿದೆ.

- Advertisement -

Latest News

error: Content is protected !!