Thursday, June 4, 2026
Homeತಾಜಾ ಸುದ್ದಿಆರು ವರ್ಷಗಳಿಂದ ಪ್ರೀತಿಸಿ, ಕೊನೆಗೆ ಬೇರೆಯವನ ಹಿಂದೆ ಬಿದ್ದ ಯುವತಿ: ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಠಾಣೆಗೆ...

ಆರು ವರ್ಷಗಳಿಂದ ಪ್ರೀತಿಸಿ, ಕೊನೆಗೆ ಬೇರೆಯವನ ಹಿಂದೆ ಬಿದ್ದ ಯುವತಿ: ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಠಾಣೆಗೆ ಶರಣಾದ ಮಾಜಿ ಪ್ರಿಯಕರ

- Advertisement -
- Advertisement -

ಕೇರಳ​: ಆರು ವರ್ಷಗಳಿಂದ ಪ್ರೀತಿಸಿ, ಕೊನೆಗೆ ಬೇರೆಯವನ ಹಿಂದೆ ಬಿದ್ದ ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಮಾಜಿ ಪ್ರಿಯಕರ ಠಾಣೆಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರಿನಲ್ಲಿ ನಡೆದಿದೆ.

ಸೂರ್ಯಪ್ರಿಯಾ (24) ಕೊಲೆಯಾದ ಯುವತಿ.ಸುಜೀಶ್​ (27) ಕೊಲೆ ಮಾಡಿದ ಆರೋಪಿ.‌ಈತ ಕೊಲೆ ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸೂರ್ಯಪ್ರಿಯ ಮತ್ತು ಸುಜೇಶ್ ಕಳೆದ ಆರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕಾಲೇಜು ದಿನಗಳಿಂದಲೂ ಇಬ್ಬರು ಸಂಬಂಧದಲ್ಲಿದ್ದರು. ಕೆಲವು ತಿಂಗಳ ಹಿಂದೆ ಸೂರ್ಯಪ್ರಿಯಾ ಸುಜೇಶ್ ಗೆ ಬಿಟ್ಟು ಇನ್ನೊಬ್ಬನ ಜೊತೆ ಪ್ರೀತಿ ಪ್ರಾರಂಭಿಸಿದ್ದಳು. ಇದರಿಂದ ನಿನ್ನೆ ಬೆಳಗ್ಗೆ ಆಕೆಯ ಮನೆಗೆ ಬಂದ ಸುಜೀಶ್​, ಆಕೆಯ ಮೊಬೈಲ್​ ಚಾಟ್ಸ್​ಗಳನ್ನು ನೋಡಿದ್ದಾನೆ. ನಂತರ ಮೆಸೇಜ್​ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳವಾಗಿದೆ.ಘಟನೆ ಸಮಯದಲ್ಲಿ ಯುವತಿ ಮನೆಯಲ್ಲಿ ಓರ್ವಳೇ ಇದ್ದಳು.

ಸೂರ್ಯಪ್ರಿಯಾ ಕುತ್ತಿಗೆಯನ್ನು ಹಿಸುಕಿ, ಟವೆಲ್​ ನಿಂದ ಉಸಿರುಗಟ್ಟಿಸಿ ಸುಜೀಶ್​ ಹತ್ಯೆ ಮಾಡಿದ್ದಾನೆ. ಬಳಿಕ ಸುಜೀಶ್​, ಸೂರ್ಯಪ್ರಿಯಾಳ ಮೊಬೈಲ್ ಫೋನ್ ತೆಗೆದುಕೊಂಡು ಆಲತ್ತೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

- Advertisement -

Latest News

error: Content is protected !!