Friday, June 5, 2026
Homeಕರಾವಳಿಕಾಸರಗೋಡುಬಾಳೆ ಎಲೆ ತರಲು ತೋಟಕ್ಕೆ ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋದ ನಿವೃತ್ತ ಶಿಕ್ಷಕಿಯ ಮೃತದೇಹ ಪತ್ತೆ

ಬಾಳೆ ಎಲೆ ತರಲು ತೋಟಕ್ಕೆ ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋದ ನಿವೃತ್ತ ಶಿಕ್ಷಕಿಯ ಮೃತದೇಹ ಪತ್ತೆ

- Advertisement -
- Advertisement -

ಕಾಸರಗೋಡು: ಕುಂಬಳೆಯ ಭೀಮನಡಿ ಗ್ರಾಮದ ಕೂರನಗುಂದದಲ್ಲಿ ಬಾಳೆ ಎಲೆ ತರಲು ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ನಿವೃತ್ತಿ ಶಿಕ್ಷಕಿಯ ಮೃತ ದೇಹ ಪತ್ತೆಯಾಗಿದೆ.

ಕೃಷಿಕ ರವೀಂದ್ರನ್‌ ಅವರ ಪತ್ನಿ, ನಿವೃತ್ತ ಶಿಕ್ಷಕಿ ಲತಾ ಅವರು ತೋಟಕ್ಕೆ ಬಾಳೆ ಎಲೆ ತರಲು ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.ಅವರ ಮೃತದೇಹ ಪ್ಲಾಚಿಕರ ಮೀಸಲು ಅರಣ್ಯದ ತೋಡಿಗೆ ನಿರ್ಮಿಸಿದ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಇವರು ಎರಡು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು.

- Advertisement -

Latest News

error: Content is protected !!