Saturday, April 27, 2024
Homeತಾಜಾ ಸುದ್ದಿಬಿಗ್ ಬಾಸ್ ಓಟಿಟಿ ಕನ್ನಡ'ದ ಮೊದಲ ಸೀಸನ್​ಗೆ ಇಂದು ಅಧಿಕೃತ ಚಾಲನೆ

ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್​ಗೆ ಇಂದು ಅಧಿಕೃತ ಚಾಲನೆ

spot_img
- Advertisement -
- Advertisement -

ಬೆಂಗಳೂರು: ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್​ಗೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಇಂದು ಸಂಜೆ 7ಕ್ಕೆ ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಸುದೀಪ್ ಸ್ಪರ್ಧಿಗಳನ್ನು ಪರಿಚಯಿಸಿ ಮನೆಗೆ ಕಳುಹಿಸಲಿದ್ದಾರೆ. ಈ ಕಾರ್ಯಕ್ರಮವು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ನೇರವಾಗಿ ಪ್ರಸಾರವಾಗಲಿದ್ದು, ಇಂದಿನಿಂದ ಮುಂದಿನ 42 ದಿನಗಳ ಕಾಲ ಕಾರ್ಯಕ್ರಮವನ್ನು ಅಲ್ಲೇ ಲೈವ್ ನೋಡಬಹುದಾಗಿದೆ.

ಸರಿ, ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್​ನಲ್ಲಿ ಯಾರೆಲ್ಲ ಭಾಗವಹಿಸಬಹುದು ಎಂಬ ಪ್ರಶ್ನೆ ಸಹಜ. ‘ಟಿವಿ, ಸಿನಿಮಾ, ರೇಡಿಯೋ, ಸೋಷಿಯಲ್ ಮೀಡಿಯಾದ 16 ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದರಲ್ಲೂ ಹೆಚ್ಚಾಗಿ ಯುವಪೀಳಿಗೆಯನ್ನು ರೀಚ್ ಆಗುವ, ಸೋಷಿಯಲ್ ಮೀಡಿಯಾ ಬಗ್ಗೆ ಅರಿವಿರುವವರೇ ಇರಲಿದ್ದಾರೆ’ ಎಂದು ಕೆಲವು ದಿನಗಳ ಹಿಂದೆ ಮಾಹಿತಿ ನೀಡಿದ್ದರು ವಯಕಾಮ್ 18 ಕನ್ನಡ ಕ್ಲಸ್ಟರ್ ಹೆಡ್ ಆದ ಪರಮೇಶ್ವರ್ ಗುಂಡ್ಕಲ್.

ಪ್ರಮುಖವಾಗಿ ಈ ಬಾರಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ವಿಷಯ ಇನ್ನೂ ಬಹಿರಂಗವಾಗದಿದ್ದರೂ, ಒಂದಿಷ್ಟು ಹೆಸರುಗಳು ಕೇಳಿಬರುತ್ತಿವೆ. ಪ್ರಮುಖವಾಗಿ ಸೋನು ಗೌಡ, ಮುಖ್ಯಮಂತ್ರಿ ಚಂದ್ರು, ರೇಖಾ ದಾಸ್, ಸಾನ್ಯ ಅಯ್ಯರ್, ರಾಕೇಶ್ ಅಡಿಗ, ಟಿವಿ ನಿರೂಪಕ ಸೋಮಣ್ಣ ಮಾಚಿಮಾಡ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಇನ್ನಷ್ಟೇ

- Advertisement -
spot_img

Latest News

error: Content is protected !!