Saturday, June 6, 2026
Homeತಾಜಾ ಸುದ್ದಿಬೆಳ್ತಂಗಡಿಯ ಬಳಂಜದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಾಲಿಬಾಲ್ ಆಟಗಾರನಿಗೆ ಆರ್ಥಿಕ ನೆರವು: ವಾಲಿಬಾಲ್ ಕ್ಲಬ್...

ಬೆಳ್ತಂಗಡಿಯ ಬಳಂಜದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಾಲಿಬಾಲ್ ಆಟಗಾರನಿಗೆ ಆರ್ಥಿಕ ನೆರವು: ವಾಲಿಬಾಲ್ ಕ್ಲಬ್ ನಿಂದ 35 ಸಾವಿರ ರೂಪಾಯಿ ಹಸ್ತಾಂತರ

- Advertisement -
- Advertisement -

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಳಂಜ ವಾಲಿಬಾಲ್ ಕ್ಲಬ್ ನ ಸದಸ್ಯ, ಯುವ ವಾಲಿಬಾಲ್ ಆಟಗಾರ ಹರ್ಷಿತ್ ದೇವಾಡಿಗ ಅಟ್ಲಾಜೆ ಅವರಿಗೆ ವಾಲಿಬಾಲ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಲಾಗಿದೆ.

ವಾಲಿಬಾಲ್ ಕ್ಲಬ್ ನಿಂದ ರೂ 35 ಸಾವಿರ ಮೊತ್ತ ಸಂಗ್ರಹಿಸಿದ್ದು ಮೊದಲ ಕಂತು ರೂಪದಲ್ಲಿ 15 ಸಾವಿರ ಹಸ್ತಾಂತರಿಸಿ, ಉಳಿದ ಮೊತ್ತ 20 ಸಾವಿರ ರೂಪಾಯಿ ಮೊತ್ತವನ್ನು ಆ 1 ರಂದು ಅವರ ಮನೆಯಲ್ಲಿ ಹರ್ಷಿತ್ ಅವರಿಗೆ ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಹಸ್ತಾಂತರಿಸಿದರು.   

ಈ ಸಂದರ್ಭದಲ್ಲಿ ಕೋಟ್ಯಾನ್ ರಾಕರ್ಸ್ ತಂಡದ ಮಾಲಕ  ಸಂತೋಷ್ ಪಿ ಕೋಟ್ಯಾನ್ ಬಳಂಜ, ಉದ್ಯಮಿ ಕೇಶವ ದೇವಾಡಿಗ ಕಲ್ಲಾಪು, ವಾಲಿಬಾಲ್ ಕ್ಲಬ್ ಕಾರ್ಯದರ್ಶಿ  ಯೋಗೀಶ್ ಆರ್, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸದಸ್ಯ ಕಿಶನ್ ಬಳಂಜ ಉಪಸ್ಥಿತರಿದ್ದರು.

- Advertisement -

Latest News

error: Content is protected !!