Saturday, June 13, 2026
Homeತಾಜಾ ಸುದ್ದಿಪುತ್ತೂರು: ಕಮರ್ಷಿಯಲ್‌ ಕಾಂಪ್ಲೆಕ್ಸ್‌ನಲ್ಲಿದ್ದ ಜ್ಯೂಸ್ ಸೆಂಟರ್‌ಗೆ ಬೆಂಕಿ: ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ...

ಪುತ್ತೂರು: ಕಮರ್ಷಿಯಲ್‌ ಕಾಂಪ್ಲೆಕ್ಸ್‌ನಲ್ಲಿದ್ದ ಜ್ಯೂಸ್ ಸೆಂಟರ್‌ಗೆ ಬೆಂಕಿ: ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ ಸಿಬ್ಬಂದಿ

- Advertisement -
- Advertisement -

ಪುತ್ತೂರು: ಜ್ಯೂಸ್ ಸೆಂಟರ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಪುತ್ತೂರು ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಆ.1 ರ ನಸುಕಿನ ಜಾವ ನಡೆದಿದೆ. ಇಲ್ಲಿ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಹೊಗೆ ಆವರಿಸಿತ್ತು.

ಈ ವೇಳೆ ರಾತ್ರಿ ಬಸ್ ನಿಲ್ದಾಣದ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೀಮ್ ಸೇನ್ ಮತ್ತು ಗೃಹರಕ್ಷಕದಳದ ಸಿಬ್ಬಂದಿ ಸುದರ್ಶನ್ ಹೊಗೆ ಬರುವುದನ್ನು ಗಮನಿಸಿ ಪರಿಶೀಲಿಸಿದಾಗ ಜ್ಯೂಸ್ ಸೆಂಟರ್ ಅಂಗಡಿಗೆ ಬೆಂಕಿ ತಗುಲಿರುವುದು ತಿಳಿದು ಬಂದಿದೆ.

ಕೂಡಲೇ ಮಾಹಿತಿಯನ್ನು ರಾತ್ರಿ ರೌಂಡ್ ನಲ್ಲಿದ್ದ ಎ.ಎಸ್.ಐ ಚಕ್ರಪಾಣಿ ಮತ್ತು ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದವರು ಬಂದು ಜ್ಯೂಸ್ ಸೆಂಟರ್ ಶಟರ್ ಬೀಗ ಒಡೆದು ಒಳಗೆ ಬೆಂಕಿ ಹತ್ತಿಕೊಂಡಿದ್ದ ಅಡುಗೆ ಅನಿಲವನ್ನು ಸ್ಟವ್ ನಿಂದ ಪ್ರತ್ಯೇಕಗೊಳಿಸಿ ಬೆಂಕಿಯ ಜ್ವಾಲೆಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!