- Advertisement -


- Advertisement -
ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಗುತ್ತಿದೆ ಕ್ಷಣಕ್ಕೊಂದು ಮಾಹಿತಿ ಸಿಗುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಇಬ್ಬರು ಆರೋಪಿಗಳನ್ನು ಸುಳ್ಯ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಅಡಗಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದು, ಮಂಗಳೂರಿಗೆ ಕರೆ ತರಲಾಗಿದೆ.
ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಸ್ಪೆಷಲ್ ಟೀಂ ನಿನ್ನೆ ಬೆಳಗ್ಗೆಯಿಂದಲೂ ಕಾರ್ಯಾಚರಣೆ ನಡೆಸಿದ್ದರು. ಶಂಕಿತರು ಇದ್ದ ಮನೆ ಸುತ್ತುವರೆದು ರಾತ್ರಿ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ಮಂಗಳೂರಿಗೆ ಕರೆ ತರಲಾಗಿದೆ.
HRBR ಲೇಔಟ್ನ ಮನೆಯೊಂದರಲ್ಲಿ ಇಬ್ಬರು ಶಂಕಿತರು ಅಡಗಿದ್ದರು ಎನ್ನಲಾಗಿದ್ದು, ಇವರು ಪ್ರವೀಣ್ ಹತ್ಯೆಯಲ್ಲಿ ಭಾಗಿಯಾಗಿದ್ದ ಹಂತಕರಾ? ಇಲ್ಲವೇ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರಾ? ಎಂಬ ಬಗ್ಗೆ ಪೋಲಿಸ್ ಮೂಲಗಳು ಮಾಹಿತಿ ನೀಡಿಲ್ಲ.
- Advertisement -


