Friday, June 5, 2026
Homeಕರಾವಳಿಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆಯ ಇಬ್ಬರ ಬಂಧನ:   ಎಸ್ಪಿ ಋಷಿಕೇಶ್ ಭಗವಾನ್ ಸೋನೆವಾಣೆ...

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆಯ ಇಬ್ಬರ ಬಂಧನ:   ಎಸ್ಪಿ ಋಷಿಕೇಶ್ ಭಗವಾನ್ ಸೋನೆವಾಣೆ ಹೇಳಿಕೆ

- Advertisement -
- Advertisement -

ಸುಳ್ಯ: ಪ್ರವೀಣ್ ಹತ್ಯೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ  ಋಷಿಕೇಶ್ ಭಗವಾನ್ ಸೋನೆವಾಣೆ ಮಾಹಿತಿ ನೀಡಿದ್ದಾರೆ‌.

ಪ್ರಕರಣಕ್ಕೆ  ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಇಬ್ಬರನ್ನು ಬಂಧಿಸಲಾಗಿದೆ‌. ಬಂಧಿತರಲ್ಲಿ ಓರ್ವ ಬೆಳ್ಳಾರೆ ಹಾಗೂ ಮತ್ತೋರ್ವ ಸವಣೂರಿನವನಾಗಿದ್ದಾನೆ.

ಝಾಕೀರ್ ಮತ್ತು ಶಫೀಕ್  ಬಂಧಿತರು.ಇವರು
ಕೃತ್ಯಕ್ಕೆ ಕೇರಳ ಮೂಲದ ಬೈಕ್ ಬಳಸಿರುವ ಶಂಕೆ ವ್ಯಕ್ತವಾಗಿದೆ. ಬಂಧಿತರನ್ನು ಇಂದು‌ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನೆವಾಣೆ ತಿಳಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಹಂತದಲ್ಲೂ ತನಿಖೆ ನಡೆಯಲಿದೆ.ಬಂಧಿತರು ಯಾವ ರೀತಿಯಲ್ಲಿ ಕೃತ್ಯ ನಡೆಸಿದ್ದಾರೆ ಎಂದು ತನಿಖೆ ಬಳಿಕ ತಿಳಿಯಲಿದೆ ಎಂದಿದ್ದಾರೆ.

- Advertisement -

Latest News

error: Content is protected !!