Friday, June 5, 2026
Homeಕರಾವಳಿಉಡುಪಿಕರ್ನಾಟಕ ಕೊತ ಕೊತ: ಉಡುಪಿಯಲ್ಲಿ ಇಂದು ಮತ್ತೆ 15 ಮಂದಿಗೆ ಕೊರೊನ, ರಾಜ್ಯದಲ್ಲಿ 178 !!

ಕರ್ನಾಟಕ ಕೊತ ಕೊತ: ಉಡುಪಿಯಲ್ಲಿ ಇಂದು ಮತ್ತೆ 15 ಮಂದಿಗೆ ಕೊರೊನ, ರಾಜ್ಯದಲ್ಲಿ 178 !!

- Advertisement -
- Advertisement -

ಉಡುಪಿ: ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆಗೆ ಅನ್ಯರಾಜ್ಯದಿಂದ ಆಗಮಿಸಿದವರೇ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಾಡಾಗುತ್ತಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಮದ್ಯಾಹ್ನದ ವೇಳೆಗೆ 15 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.

ಇಂದಿನ ಎಲ್ಲಾ 14 ಪ್ರಕರಣಗಳೂ ಕೂಡಾ ಮಹಾರಾಷ್ಟ್ರದಿಂದ ಬಂದವರಿಂದಲೇ ವರದಿಯಾಗಿದೆ. ಇವರೆಲ್ಲರನ್ನೂ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಗುರುವಾರ ಜಿಲ್ಲೆಯಲ್ಲಿ ಒಟ್ಟು 29 ಪ್ರಕರಣ ದೃಢವಾಗಿತ್ತು. ಅದರಲ್ಲಿ ಹೆಚ್ಚಿನವರು ಮಹಾರಾಷ್ಟ್ರದಿಂದ ಬಂದವರಾಗಿದ್ದರು. ಜಿಲ್ಲೆಯಲ್ಲಿ ಇದುವರೆಗೆ ಕೇವಲ ಮೂವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ಇಂದು178 ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆಯಾಗಿದೆ.

ರಾಯಚೂರು 62
ಯಾದಗಿರಿ 60
ಕಲಬುರ್ಗಿ 15
ಉಡುಪಿ 15
ಬೆಂಗಳೂರು 11
ಚಿಕ್ಕಬಳ್ಳಾಪುರ 04
ದಾವಣಗೆರೆ 04
ಮಂಡ್ಯ 02
ಮೈಸೂರು 02
ಶಿವಮೊಗ್ಗ 01
ಚಿತ್ರದುರ್ಗ 01
ಧಾರವಾಡ 01

- Advertisement -

Latest News

error: Content is protected !!