Saturday, June 6, 2026
Homeಕರಾವಳಿಉಡುಪಿಉಡುಪಿ ಕೃಷ್ಣ ಮಠಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ

ಉಡುಪಿ ಕೃಷ್ಣ ಮಠಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ

- Advertisement -
- Advertisement -

ಉಡುಪಿ:  ಕೃಷ್ಣ ಮಠಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ನವಗ್ರಹ ಕಿಂಡಿಯ ಮೂಲಕ ದೇವರ ದರುಶನ ಪಡೆದರು.

ಈ ವೇಳೆ ಸಿಎಂಗೆ  ಸಚಿವ ಆರ್ ಆಶೋಕ್ ,ಕೋಟ ಶ್ರೀನಿವಾಸ್ ಪೂಜಾರಿ  ಬೈಂದೂರು ಶಾಸಕ  ಸುಕುಮಾರ್ ಶೆಟ್ಟಿ, ಶಾಸಕ ರಘಪತಿ ಭಟ್ ಸಾಥ್ ನೀಡಿದರು.

ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾ ಸಾಗರ ತೀರ್ಥ  ಸ್ವಾಮೀಜಿ ಯವರಿಗೆ ಇದೇ ವೇಳೆ ಗುರುವಂದನೆ ಸಲ್ಲಿಸಿದರು. ಬಳಿಕ ಕೃಷ್ಣಾಪುರ ಶ್ರೀಗಳು ಮುಖ್ಯಮಂತ್ರಿ ಗಳಿಗೆ ಗೌರವ ಅರ್ಪಿಸಿದರು.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರು ಪೌರ್ಣಿಮೆ ಅಂಗವಾಗಿ ಉಡುಪಿಯ ಆರ್ ಎಸ್ ಎಸ್ ಕಚೇರಿ ಕೇಶವ ನಿಲಯ ಕ್ಕೆ ಭೇಟಿ ನೀಡಿ ಗುರುವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ, ಎಸ್ ಅಂಗಾರ, ಶಾಸಕ ರಘುಪತಿ ಭಟ್, ಸುಕುಮಾರ ಶೆಟ್ಟಿ ಸೇರಿದಂತೆ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಕೃಷ್ಣ ಮಠದಿಂದ ಸಿಎಂ ಮರವಂತೆಗೆ ತೆರಳಿದರು. ಬೈಂದೂರು ತಾಲೂಕಿನ ಮರವಂತೆ ಬೀಚ್ ನ  ಕಡಲ್ಕೊರೆತ ಪ್ರದೇಶ ,ನೆರೆ ಪೀಡಿತ ಪ್ರದೇಶಕ್ಕೆ  ಸಿಎಂ ಭೇಟಿ ನೀಡಿ‌ ಪರಿಶೀಲಿಸಲಿದ್ದಾರೆ.

- Advertisement -

Latest News

error: Content is protected !!