Sunday, October 18, 2026
Homeತಾಜಾ ಸುದ್ದಿಮರಾಠಾ ಅಭಿವೃದ್ಧಿ ನಿಗಮದಿಂದ ರಾಜ್ಯಾದ್ಯಂತ ಮರಾಠಾ ಮಿಲಿಟರಿ ಕ್ಯಾಂಟೀನ್ ಸ್ಥಾಪನೆ

ಮರಾಠಾ ಅಭಿವೃದ್ಧಿ ನಿಗಮದಿಂದ ರಾಜ್ಯಾದ್ಯಂತ ಮರಾಠಾ ಮಿಲಿಟರಿ ಕ್ಯಾಂಟೀನ್ ಸ್ಥಾಪನೆ

- Advertisement -
- Advertisement -

ಬೆಂಗಳೂರು: ಮರಾಠಾ ಸಮುದಾಯದ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ಮರಾಠಾ ಮಿಲಿಟರಿ ಕ್ಯಾಂಟೀನ್ ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ.

ಮರಾಠಾ ಅಭಿವೃದ್ಧಿ ನಿಗಮದ‌ ಅಧ್ಯಕ್ಷ ಎಂ.ಜಿ. ಮುಳೆ ಬೆಂಗಳೂರಿನಲ್ಲಿ ವಿಕಾಸಸೌಧದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹತ್ತು ಮತ್ತು ಪ್ರತಿ ಜಿಲ್ಲೆಗೆ ಒಂದರಂತೆ 30 ಕ್ಯಾಂಟೀನ್ ಸೇರಿ ಒಟ್ಟು 40 ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ.

ಕ್ಯಾಂಟೀನ್ ತೆರೆಯಲು ಮರಾಠಾ ಅಭಿವೃದ್ಧಿ ನಿಗಮ 5 ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡಲಿದ್ದು, ಇದರಲ್ಲಿ 2.5 ಲಕ್ಷ ರೂಪಾಯಿ ಸಬ್ಸಿಡಿ ದೊರೆಯಲಿದೆ.

ಕ್ಯಾಂಟೀನ್ ತೆರೆಯುವ ಸಂಬಂಧ ಮರಾಠಾ‌‌ ಅಭಿವೃದ್ಧಿ ನಿಗಮದಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಆರ್ಥಿಕ ಇಲಾಖೆ ಅನುಮೋದನೆ ಬಳಿಕ ರಾಜ್ಯದಲ್ಲಿ ಮರಾಠಾ ಮಿಲಿಟರಿ ಕ್ಯಾಂಟೀನ್ ಗಳು ಸ್ಥಾಪನೆಯಾಗಲಿವೆ.

- Advertisement -

Latest News

error: Content is protected !!