- Advertisement -
![]()
- Advertisement -
ಹಾಸನ: ಶಿರಾಡಿ ಘಾಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿರುವ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಭೇಟಿ ನೀಡಿ,ಕುಸಿದಿರೊ ರಸ್ತೆ ಪರಿಶೀಲಿಸಿ, ಹೊಸ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ರಸ್ತೆ ಕುಸಿದಿದ್ದು, ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದು ಸಂಚಾರ ಬಂದ್ ಆಗಿತ್ತು.
ಕಳೆದ ಒಂದು ವಾರಗಳ ಸತತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿತ ಸಂಭವಿಸಿತ್ತು. ಡಿಸಿ ಆರ್.ಗಿರೀಶ್, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದ್ರು.
- Advertisement -


