Sunday, June 7, 2026
Homeಕರಾವಳಿಧರ್ಮಸ್ಥಳ: ಬ್ಯಾಂಕ್ ಆಫ್ ಬರೋಡ ಶಿಶಿಲ ಶಾಖೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ.

ಧರ್ಮಸ್ಥಳ: ಬ್ಯಾಂಕ್ ಆಫ್ ಬರೋಡ ಶಿಶಿಲ ಶಾಖೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ.

- Advertisement -
- Advertisement -

ಧರ್ಮಸ್ಥಳ: 2021-2022 ವಿತ್ತೀಯ ವರ್ಷದಲ್ಲಿ ಬ್ಯಾಂಕ್ ಆಫ್ ಬರೋಡ ಶಿಶಿಲ ಶಾಖೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಭಾರತ ಸರ್ಕಾರದ ಭವಿಷ್ಯನಿಧಿ ಖಾತೆ(PPF) ತೆರೆಯುವಿಕೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಶಿಶಿಲ ಶಾಖೆಗೆ ಲಭಿಸಿದ್ದು,  ಹೈದರಾಬಾದ್ ನ ಮಾದಾಪುರ ಹೈಟೆಕ್ ಸಿಟಿಯಲ್ಲಿ ಗವರ್ನ್ ಮೆಂಟ್ ಬ್ಯುಸಿನೆಸ್ ಪ್ರೀಮಿಯರ್ ಲೀಗ್ ವತಿಯಿಂದ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಬ್ಯಾಂಕ್ ಆಫ್ ಬರೋಡ ಶಿಶಿಲ ಶಾಖಾ ವ್ಯವಸ್ಥಾಪಕರಾದ ಶಿವಪ್ರಸಾದ್ ಸುರ್ಯ ಇವರಿಗೆ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಜೋಯ್ ದೀಪ್ ದತ್ತಾ ರೋಯ್ ಮತ್ತು ವಿಕ್ರಮಾದಿತ್ಯ ಸಿಂಗ್ ಕಿಚಿ ಅವರು ಪ್ರಶಸ್ತಿ ನೀಡಿದರು.
ಗ್ರಾಮೀಣ ಭಾಗದ ಶಿಶಿಲ ಶಾಖೆ ದೇಶದ ಗಮನ ಸೆಳೆಯುವ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

- Advertisement -

Latest News

error: Content is protected !!