Saturday, June 13, 2026
Homeಕರಾವಳಿಗೋ ಹತ್ಯಾ ನಿಷೇಧ ಕಾನೂನಿನ ಕ್ರಮ ಕೈಗೊಂಡು ಅಪರಾಧಿಯನ್ನು ಬಂಧಿಸಿ ಎಂದು ತಾಕೀತು ಮಾಡಿದ: ಡಾ....

ಗೋ ಹತ್ಯಾ ನಿಷೇಧ ಕಾನೂನಿನ ಕ್ರಮ ಕೈಗೊಂಡು ಅಪರಾಧಿಯನ್ನು ಬಂಧಿಸಿ ಎಂದು ತಾಕೀತು ಮಾಡಿದ: ಡಾ. ಭರತ್ ಶೆಟ್ಟಿ

- Advertisement -
- Advertisement -

ಮಂಗಳೂರು: ಇಲ್ಲಿನ ಅಡ್ಯಾರ್ ನ ಮನೆಯೊಂದರಲ್ಲಿ ಗೋವನ್ನು ಕಡಿದು ಮಾಂಸ ಮಾರಾಟ ಮಾಡುವ ದಂಧೆಯನ್ನು ಪೋಲಿಸರು ಭೇದಿಸಿದ್ದು, ಈ ಪ್ರಕರಣದಲ್ಲಿ ರಾಷ್ಟ್ರೀಯ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿರುವ ಪಕ್ಷದ ಕಾರ್ಯಕರ್ತ ತೊಡಗಿಕೊಂಡಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.

ರಾಷ್ಟ್ರೀಯ ಪಕ್ಷ ಕಾಯಕರ್ತನೋರ್ವ ಅಡ್ಯಾರ್‌’ನ ತನ್ನದೇ ಮನೆಯಲ್ಲಿ ಗೋ ಹತ್ಯೆ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ನೂತನ ಗೋ ಹತ್ಯಾ ನಿಷೇಧ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಬಂಧಿಸಿ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ಸರಕಾರ ಜಾರಿ ಮಾಡಿರುವ ಗೋ ಹತ್ಯೆಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು. ಹಟ್ಟಿಯಿಂದ ಕದ್ದ ಗೋವುಗಳು, ಬೀಡಾಡಿ ಗೋವುಗಳನ್ನು ಕಳ್ಳತನ ಮಾಡಿ ಮನೆಯಲ್ಲಿಯೇ ವಧಿಸುವ ಜಾಲ ಸಕ್ರಿಯವಾಗಿರುವ ಸಂಶಯವಿದ್ದು, ಇಂತಹ ಕೃತ್ಯಗಳಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಯಿದೆ. ಕ್ಷೇತ್ರದ ವಿವಿಧೆಡೆ ಮಾಹಿತಿ ಲಭ್ಯವಿರುವ ಅಕ್ರಮ ಗೋ ವಧಾ ಕೇಂದ್ರದ ಮೇಲೆ ನಿಗಾ ಇರಿಸಿ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕೆಂದು ಈಗಾಗಲೇ ಗೃಹ ಸಚಿವರು ಆದೇಶ ನೀಡಿದ್ದು ಅದು ಪಾಲನೆಯಾಗಬೇಕಿದೆ ಎಂದು ಶಾಸಕರು ತಿಳಿಸಿದ್ದಾರೆ.

- Advertisement -

Latest News

error: Content is protected !!