Saturday, June 13, 2026
Homeತಾಜಾ ಸುದ್ದಿಲಷ್ಕರ್ ಎ ತೊಯ್ಯಾ ಸಂಘಟನೆಯ ಇಬ್ಬರು ಶಸ್ತ್ರಾಸ್ತ್ರ ಧಾರಿಗಳನ್ನು ಬಂಧಿಸಿದ ಗ್ರಾಮಸ್ಥರು: ಎರಡು ಎಕೆ ಅಸಾಲ್ಟ್...

ಲಷ್ಕರ್ ಎ ತೊಯ್ಯಾ ಸಂಘಟನೆಯ ಇಬ್ಬರು ಶಸ್ತ್ರಾಸ್ತ್ರ ಧಾರಿಗಳನ್ನು ಬಂಧಿಸಿದ ಗ್ರಾಮಸ್ಥರು: ಎರಡು ಎಕೆ ಅಸಾಲ್ಟ್ ರೈಫಲ್ಸ್, 7 ಗ್ರೆನೇಡ್ ವಶ

- Advertisement -
- Advertisement -

ಶ್ರೀನಗರ: ಲಷ್ಕರ್ ಎ ತೊಯ್ಯಾ (ಎಲ್‌ಇಟಿ) ಸಂಘಟನೆಯ ಇಬ್ಬರು ಶಸ್ತ್ರಧಾರಿ ಉಗ್ರರನ್ನು ಗ್ರಾಮಸ್ಥರೇ ಹೆಡೆಮುರಿಕಟ್ಟಿ
ಪೊಲೀಸರಿಗೆ ಒಪ್ಪಿಸಿದ ಘಟನೆಯು ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ.

ಇಬ್ಬರು ಉಗ್ರರ ಪೈಕಿ ಓರ್ವ ಉಗ್ರ ಎಲ್‌ಇಟಿ ಸಂಘಟನೆಯ ಕಮಾಂಡ್ ಆಗಿದ್ದು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರನಾಗಿದ್ದಾನೆ ಎಂದು ತಿಳಿದುಬಂದಿದೆ. ರಚೌರಿ ಜಿಲ್ಲೆಯ ನಿವಾಸಿ ಆಗಿದ್ದ ಎಲ್‌ಇಟಿ ಕಮಾಂಡರ್ ತಲಿಬ್ ಹುಸೇನ್ ಹಾಗೂ ಜಿಲ್ಲೆಯಲ್ಲಿ ಇತ್ತೀಚಿನ ಐಇಡಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಫೈಜಲ್ ಅಹ್ಮದ್ ದರ್ ನ್ನು ತುಕ್ಸಾನ್ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಬಂಧಿತರಿಂದ ಎರಡು ಎಕೆ ಅಸಾಲ್ಟ್ ರೈಫಲ್ಸ್ 7 ಗ್ರೆನೇಡ್ ಗಳು, ಒಂದು ಪಿಸ್ತೂಲ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರಾಮಸ್ಥರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಡಿಜಿಪಿ ದಲ್ಲಿ ಸಿಂಗ್ ಗ್ರಾಮಸ್ಥರಿಗೆ 2 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.

- Advertisement -

Latest News

error: Content is protected !!