Thursday, June 4, 2026
Homeಕರಾವಳಿಮಂಗಳೂರಿನ ಇಬ್ಬರು ಅಬಕಾರಿ ನಿರೀಕ್ಷಕರ ವರ್ಗಾವಣೆ

ಮಂಗಳೂರಿನ ಇಬ್ಬರು ಅಬಕಾರಿ ನಿರೀಕ್ಷಕರ ವರ್ಗಾವಣೆ

- Advertisement -
- Advertisement -

ಮಂಗಳೂರು: ಮಂಗಳೂರಿನ ಬೈಕಂಪಾಡಿ ಅಬಕಾರಿ ಅಧೀಕ್ಷಕರ ಕಚೇರಿಯ ಅಬಕಾರಿ ನಿರೀಕ್ಷಕ ಸುನೀಲ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ ಅಬಕಾರಿ ನಿರೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ವಿಜಯಕುಮಾರ್ ಅವರನ್ನು ಮಂಗಳೂರು ಉಪ ವಿಭಾಗ -2 ರ ಅಬಕಾರಿ ನಿರೀಕ್ಷಕರಾಗಿ ವರ್ಗಾಯಿಸಲಾಗಿದೆ.

ಸಾರ್ವತ್ರಿಕ ವರ್ಗಾವಣೆ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ 8 ಅಬಕಾರಿ ನಿರೀಕ್ಷಕರು, 10 ಅಬಕಾರಿ ಉಪ ನಿರೀಕ್ಷಕರು, 1 ಅಬಕಾರಿ ಪೇದೆ, 1 ಪ್ರಥಮ ದರ್ಜೆ ಸಹಾಯಕ ಮತ್ತು 3 ದ್ವಿತೀಯ ದರ್ಜೆ ಸಹಾಯಕರನ್ನು ವರ್ಗಾವಣೆ ಮಾಡಲಾಗಿದೆ.

- Advertisement -

Latest News

error: Content is protected !!