Monday, June 8, 2026
Homeಕರಾವಳಿಸುಳ್ಯ ಸುತ್ತಮುತ್ತ ಭೂಕಂಪನ ಹಿನ್ನೆಲೆ : ಸಂಬಂಧಪಟ್ಟ ಇಲಾಖೆಯ ತಜ್ಞರಿಗೆ ತಕ್ಷಣ ಪರಿಶೀಲನೆ ನಡೆಸಿ ವರದಿ...

ಸುಳ್ಯ ಸುತ್ತಮುತ್ತ ಭೂಕಂಪನ ಹಿನ್ನೆಲೆ : ಸಂಬಂಧಪಟ್ಟ ಇಲಾಖೆಯ ತಜ್ಞರಿಗೆ ತಕ್ಷಣ ಪರಿಶೀಲನೆ ನಡೆಸಿ ವರದಿ ನೀಡಲು ಸಚಿವ ಅಂಗಾರ ಸೂಚನೆ

- Advertisement -
- Advertisement -

ಸುಳ್ಯ: ಸುಳ್ಯ ಸುತ್ತಮುತ್ತ ಲಘು ಭೂ ಕಂಪನದ ಅನುಭವ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ತಜ್ಞರು ತಕ್ಷಣ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರನ್ನು ಈಗಾಗಲೇ ಸಂಪರ್ಕಿಸಿ ಭೂಮಿ ಕಂಪಿಸಿದ ಪ್ರದೇಶಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಲಹೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ. ಜಿಲ್ಲಾಡಳಿತ ಕೂಡಾ ಮುಂಜಾಗ್ರಾ ಕ್ರಮ ವಹಿಸಲು ಸನ್ನದ್ಧವಾಗಿದೆ. ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಹರಡುತ್ತಿರುವ ವದಂತಿಗಳಿಗೆ ಜನತೆ ಕಿವಿಗೊಡಬಾರದು ಎಂದು ಸಚಿವ ಅಂಗಾರ ತಿಳಿಸಿದರು.

- Advertisement -

Latest News

error: Content is protected !!