Saturday, June 13, 2026
Homeಕರಾವಳಿಉಡುಪಿಹೆಬ್ರಿ: ಕತ್ತಿ ತೋರಿಸಿ ಮನೆಯವರನ್ನು ಬೆದರಿಸಿ ಗೋಕಳ್ಳತನ: ಆರೋಪಿಗಳಿಗೆ ಹುಡುಕಾಟ ನಡೆಸಿರುವ ಪೊಲೀಸರು

ಹೆಬ್ರಿ: ಕತ್ತಿ ತೋರಿಸಿ ಮನೆಯವರನ್ನು ಬೆದರಿಸಿ ಗೋಕಳ್ಳತನ: ಆರೋಪಿಗಳಿಗೆ ಹುಡುಕಾಟ ನಡೆಸಿರುವ ಪೊಲೀಸರು

- Advertisement -
- Advertisement -

ಹೆಬ್ರಿ : ಕೊಟ್ಟಿಗೆಯಲ್ಲಿದ್ದ ದನಗಳನ್ನು ಕದ್ದೊಯ್ಯುತ್ತಿದ್ದು, ಈ ವೇಳೆ ಮನೆಯವರು ದನಗಳನ್ನು ಬಿಡಿಸಿಕೊಳ್ಳಲು ಮುಂದಾದಾಗ ಅವರನ್ನ ಬೆದರಿಸಿ ದನಗಳನ್ನು ಕದ್ದೊಯ್ದ ಘಟನೆ ಹೆಬ್ರಿಯ ಕಬ್ಬಿನಾಲೆ ಗ್ರಾಮದ ಬಾಲ್ಟಾರು ಎಂಬಲ್ಲಿ ನಡೆದಿದೆ. ದುಷ್ಕರ್ಮಿಗಳು  ಕತ್ತಿ ತೋರಿಸಿ ಮನೆಯವರನ್ನು ಹೆದರಿಸಿದ್ದಾರೆ.

ಕಾರಿನಲ್ಲಿ ಬಂದ ಮೂವರು ದಯಕರ ಗೌಡ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿದ ಮೂರು ದನಗಳ ಪೈಕಿ ಎರಡು ದನಗಳನ್ನು ಕದ್ದು ಎಳೆದುಕೊಂಡು ಹೋಗುತ್ತಿದ್ದು, ಈ ವೇಳೆ ಮನೆಯವರು ದನಗಳನ್ನು ಬಿಡಿಸಿಕೊಳ್ಳಲು ಮುಂದೆ ಹೋದಾಗ ದುಷ್ಕರ್ಮಿಗಳು ಕತ್ತಿಯನ್ನು ತೋರಿಸಿ ಹೆದರಿಸಿ ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಎರಡು ದನಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!