Saturday, June 6, 2026
Homeತಾಜಾ ಸುದ್ದಿ30 ಸೆಕೆಂಡ್ ಲೇಟ್ ಆಗಿದ್ದಕ್ಕೆ ಪ್ರಾಂಶುಪಾಲರಿಗೆ ಕಪಾಳ ಮೋಕ್ಷ ಮಾಡಿದ ಜೆಡಿಎಸ್ ಶಾಸಕ!

30 ಸೆಕೆಂಡ್ ಲೇಟ್ ಆಗಿದ್ದಕ್ಕೆ ಪ್ರಾಂಶುಪಾಲರಿಗೆ ಕಪಾಳ ಮೋಕ್ಷ ಮಾಡಿದ ಜೆಡಿಎಸ್ ಶಾಸಕ!

- Advertisement -
- Advertisement -

ಮಂಡ್ಯ: ಶಾಸಕರೊಬ್ಬರು ಪ್ರಾಂಶುಪಾಲರ ಕೆನ್ನೆಗೆ ಬಾರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.‌

ಮಂಡ್ಯ ಶಾಸಕ ಎಂ. ಶ್ರೀನಿವಾಸ್ ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲರ ಕಪಾಳಕ್ಕೆ ಬಾರಿಸಿದ್ದಾರೆ.

ಮಂಡ್ಯದ ಉನ್ನತೀಕರಿಸಿದ ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆ ವೇಳೆ ಘಟನೆ ನಡೆದಿದ್ದು, ಶಾಸಕರ ಹಿಂದೆ ಇದ್ದ ಪ್ರಾಂಶುಪಾಲರು ಮುಂದೆ ಬರಲು 30 ಸೆಕೆಂಡ್ ತಡವಾಗಿದ್ದಕ್ಕೆ ಕಪಾಳಕ್ಕೆ ಬಾರಿಸಿದ್ದಾರೆ.

ಮಂಡ್ಯದ ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆ ಬಳಿಕ ಶಾಸಕರಿಂದ ಕಾಲೇಜು ವೀಕ್ಷಣೆ ವೇಳೆ ಪ್ರಾಂಶುಪಾಲ ಆರ್. ನಾಗಾನಂದ್ ಶಾಸಕರ ಹಿಂದೆ ಬರುತ್ತಿದ್ದರು. ಈ ವೇಳೆ‌ ಕಂಪ್ಯೂಟರ್ ಕೊಠಡಿ ವೀಕ್ಷಣೆ ವೇಳೆ ಮಾಹಿತಿಗಾಗಿ ಶಾಸಕರು ಪ್ರಾಂಶುಪಾಲರನ್ನು ಹುಡುಕಾಡಿದ್ದರು.

ಪ್ರಾಂಶುಪಾಲರು 30 ಸೆಕೆಂಡ್ ತಡವಾಗಿ ಬಂದಿದ್ದಕ್ಕೆ ಸಿಟ್ಟಾದ ಶಾಸಕ ಎಂ. ಶ್ರೀನಿವಾಸ್ ನಿಮ್ಮಂತವರಿಂದಲೇ ಮಂಡ್ಯ ಅಭಿವೃದ್ಧಿ ಆಗ್ತಿಲ್ಲ ಎಂದು ಕೆನ್ನೆಗೆ ಹೊಡೆದಿದ್ದಾರೆ.

ಶಾಸಕರ ಏಟಿಗೆ ಕನ್ ಫ್ಯೂಸ್ ಆದ ಪ್ರಾಂಶುಪಾಲರು ನಂತರ ನಗುತ್ತಲೇ ಪರಿಸ್ಥಿತಿ ನಿಭಾಯಿಸಿದರು.

- Advertisement -

Latest News

error: Content is protected !!